Publish Date: Wed, 16 Jul 2025 (12:23 IST)
Updated Date: Wed, 16 Jul 2025 (12:33 IST)
ಇತ್ತೀಚೆಗಿನ ದಿನಗಳಲ್ಲಿ ಬಹುತೇಕರಲ್ಲಿ ಮಧ್ಯವಯಸ್ಸಿಗೆ ಬರುತ್ತಿದ್ದಂತೇ ಕೊಲೆಸ್ಟ್ರಾಲ್ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಔಷಧಿ ತೆಗೆದುಕೊಳ್ಳದೇ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ ಇಲ್ಲಿ ನೋಡಿ.
ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಅದು ಅಪಾಯಕಾರಿ. ಕೊಲೆಸ್ಟ್ರಾಲ್ ಹೆಚ್ಚಳ ಹಲವು ರೋಗಗಳಿಗೆ ಕಾರಣವಾಗಬಹುದು. ಮುಖ್ಯವಾಗಿ ಹೃದಯ ಸಮಸ್ಯೆ, ರಕ್ತನಾಳಗಳ ಸಮಸ್ಯೆ, ಬೊಜ್ಜು ಇತ್ಯಾದಿ ಸಮಸ್ಯೆ ಕಂಡುಬರುತ್ತದೆ.
ಕೆಲವರು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪ್ರತಿನಿತ್ಯ ಮಾತ್ರೆ ಸೇವನೆ ಮಾಡುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳದೆಯೂ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡಲು ಸುಲಭ ಉಪಾಯವೆಂದರೆ ನಮ್ಮ ಆಹಾರ ಮತ್ತು ಜೀವನಶೈಲಿ ಬದಲಾಯಿಸುವುದು.
ಆಹಾರದಲ್ಲಿ ಆದಷ್ಟು ಸಂಸ್ಕರಿತ ಆಹಾರಗಳು, ಅತಿಯಾದ ಕೊಬ್ಬಿನಂಶವಿರುವ ಬೇಕರಿ ತಿಂಡಿಗಳು, ಕೊಬ್ಬು ತೆಗೆಯದ ಹಾಲು, ಹಾಲಿನ ಉತ್ಪನ್ನ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸೇವನೆ ಮಾಡುವುದನ್ನು ಅವಾಯ್ಡ್ ಮಾಡಬೇಕು.
ಇದರ ಬದಲಿಗೆ ಓಟ್ಸ್, ತರಕಾರಿ, ಹಣ್ಣಿನಂತಹ ಫೈಬರ್ ಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಬೇಡದ ಕೊಬ್ಬಿನ ಸಂಗ್ರಹವಾಗದು. ಬಾದಾಮಿ, ಬಾದಾಮಿ ಆಯಿಲ್, ನಟ್ಸ್, ಬೇಳೆ ಕಾಳುಗಳು, ಅವಕಾಡೊನಂತಹ ಆರೋಗ್ಯಕರ ಕೊಬ್ಬಿನಂಶವಿರುವ ಆಹಾರವನ್ನು ಹೆಚ್ಚು ಸೇವನೆ ಮಾಡಿ. ಇದರಿಂದ ಕೊಲೆಸ್ಟ್ರಾಲ್ ತಾನಾಗಿಯೇ ನಿಯಂತ್ರಣದಲ್ಲಿರುತ್ತದೆ.