ಜಿಂಕೆ ಚರ್ಮ ಮಾರಾಟ ಯತ್ನ ಪ್ರಕರಣವನ್ನು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಬಂಧಿತನನ್ನು ಬೆಳಗಾವಿಯ ಹನುಮಂತ ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಖಾಸಗಿ ಬಸ್ ಮೂಲಕ ಬಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿಯನ್ನು ಆಧಾರಿಸಿ ಪುತ್ತೂರು ಅರಣ್ಯ ಸಂಚಾರಿದಳದ ಎಸ್. ಐ. ಜಾನಕಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಜಿಂಕೆ ಚರ್ಮ ಮಾರಾಟ ಮಾಡಲು ಗಿರಾಕಿಗಾಗಿ ಕಾಯುತ್ತಿದ್ದ ಬೆಳಗಾವಿಯ ಹನುಮಂತ ಎಂಬಾತನನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಜಿಂಕೆ ಚರ್ಮ ವಶಕ್ಕೆ ಪಡೆದಿದೆ.
ಬಂಧಿತ ಹನುಮಂತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್ ಐ
ಜಾನಕಿಯವರೊಂದಿಗೆ ಸಿಬ್ಬಂದಿಗಳಾದ ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ ಕುಮಾರ್ ಮತ್ತು ಸಂತೋಷ್ ಭಾಗವಹಿಸಿದ್ದರು.