Publish Date: Sat, 25 Nov 2017 (11:24 IST)
Updated Date: Sat, 25 Nov 2017 (15:39 IST)
ಟಂಟಂ ವಾಹನ ಹಾಗೂ ಸ್ವಿಫ್ಟ್ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಜಾತ್ರೆಗೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಭಕ್ತರಲ್ಲಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದು, ನಾಲ್ಕೈದು ಜನರು ಗಾಯಗೊಂಡಿರುವ ಅಫಜಲಪುರ ತಾಲ್ಲೂಕಿನ ಗೊಬ್ಬರವಾಡಿ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಮಹೇಶ ಶೆಟ್ಟಿ (36) ಹಾಗೂ ಈರಯ್ಯ (34) ಸಾವನ್ನಪ್ಪಿದ್ದಾರೆ. ಇವರು ಚಿಣಮಗೇರಿ ಜಾತ್ರೆಗೆ ಹೋಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ದೇವಲಗಾಣಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗೊಬ್ಬರವಾಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅತಘಾತದ ರಭಸಕ್ಕೆ ವಾಹನಗಳು ಜಖಂಗೊಂಡಿವೆ.