ಮುಟ್ಟಿನ ನೋವು ಇರುವಾಗ ಇದನ್ನು ಮಾಡದಿರುವುದೇ ಉತ್ತಮ

Krishnaveni K
ಮಂಗಳವಾರ, 16 ಸೆಪ್ಟಂಬರ್ 2025 (10:53 IST)
ಇತ್ತೀಚೆಗಿನ ದಿನಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ನೋವು ಅನುಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಸಮಯದಲ್ಲಿ ಈ ಕೆಲಸಗಳನ್ನು ಮಾಡದೇ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.

ಹೊಟ್ಟೆಯ ನರಗಳೆಲ್ಲಾ ಎಳೆದಂತಾಗಿ, ಕಾಲುಗಳಲ್ಲಿ ಸೆಳೆತವಾದಂತಾಗಿ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ತೀವ್ರ ನೋವು ಅನುಭವಿಸುತ್ತಾರೆ. ಕೆಲವರಿಗೆ ನೋವಿನಿಂದ ವಾಕರಿಕೆ, ತಲೆಸುತ್ತು ಬರುವ ಸಾಧ್ಯತೆಯೂ ಇರುತ್ತದೆ.

ಇಂತಹ ಸಂದರ್ಭದಲ್ಲಿ ದೈಹಿಕವಾಗಿ ಶ್ರಮವಹಿಸುವ ಚಟುವಟಿಕೆಗಳನ್ನು ಮಾಡದೇ ಇರುವುದು ಉತ್ತಮ. ದ್ವಿಚಕ್ರ ವಾಹನ ಪ್ರಯಾಣ, ಭಾರ ಎತ್ತುವ ಕೆಲಸಗಳು ನಿಮ್ಮ ಮುಟ್ಟಿನ ನೋವನ್ನು ಇನ್ನಷ್ಟು ಹೆಚ್ಚಿಸಬಹುದು. ಹೀಗಾಗಿ ಇವುಗಳನ್ನು ಅವಾಯ್ಡ್ ಮಾಡಿ.

ಇದಲ್ಲದೆ, ಈ ಸಮಯದಲ್ಲಿ ಕೆಫೈನ್ ಅಂಶ ಹೆಚ್ಚಿರುವ ಪಾನೀಯ, ಚಾಕಲೇಟ್ ಗಳ ಸೇವನೆ ಮಾಡಬೇಡಿ. ಇದು ನೋವು ಹೆಚ್ಚಿಸುತ್ತದೆ. ಅದೇ ರೀತಿ ಸಕ್ಕರೆ ಅಂಶ ಮತ್ತು ಉಪ್ಪಿನ ಅಂಶ ಅತಿಯಾಗಿ ಇರುವ ಆಹಾರ ಸೇವಿಸಬೇಡಿ. ಅದರ ಬದಲು ಬೆಲ್ಲ, ಎಳ್ಳು ಇತ್ಯಾದಿ ಆಹಾರಗಳು ದೇಹಕ್ಕೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಎರಡೂ ಮಸೂದೆ ವಾಪಸ್‌, ಯಾವುದು ಗೊತ್ತಾ

ಬಳ್ಳಾರಿ ಶೂಟೌಟ್ ಪ್ರಕರಣ: ತನಿಖೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಹಿ.ಪ್ರದೇಶ: ಕಂದಕಕ್ಕೆ ಉರುಳಿದ ಖಾಸಗಿ ಬಸ್‌, 9 ಮಂದಿ ಸಾವು, 40ಮಂದಿಗೆ ಗಾಯ

ಮಮತಾ ಬ್ಯಾನರ್ಜಿ ಹೆಣ್ಣು ಹುಲಿ, ಶರಣಾಗಲ್ಲ: ಮೆಹಬೂಬಾ ಮುಫ್ತಿ

ಆತ್ಮಹತ್ಯೆಗೆ ಶರಣಾದ ಡೆಂಟಲ್ ವಿದ್ಯಾರ್ಥಿನಿ, ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡ್ಳ ಯುವತಿ

ಮುಂದಿನ ಸುದ್ದಿ
Show comments