Select Your Language

Notifications

webdunia
webdunia
webdunia
webdunia

7 ನೇ ತರಗತಿ ವಿದ್ಯಾರ್ಥಿನಿ ಮೇಲೆ ಹಿರಿಯ ವಿದ್ಯಾರ್ಥಿನಿಯರಿಂದಲೇ ಲೈಂಗಿಕ ಶೋಷಣೆ !

7 ನೇ ತರಗತಿ ವಿದ್ಯಾರ್ಥಿನಿ ಮೇಲೆ ಹಿರಿಯ ವಿದ್ಯಾರ್ಥಿನಿಯರಿಂದಲೇ ಲೈಂಗಿಕ ಶೋಷಣೆ !
NewDelhi , ಸೋಮವಾರ, 27 ಫೆಬ್ರವರಿ 2017 (10:44 IST)
ನವದೆಹಲಿ: ಮೋತಿ ನಗರದ ಸರ್ಕಾರಿ ಶಾಲೆಯೊಂದರ 7 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಹಿರಿಯ ಸಹಪಾಠಿಗಳು ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾಳೆ.


ವಿಚಿತ್ರವೆಂದರೆ ಆರೋಪಕ್ಕೊಳಗಾದವರೂ ವಿದ್ಯಾರ್ಥಿನಿಯರೇ. 8 ಮತ್ತು 9 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಆಕೆಯನ್ನು ಊಟದ ವಿರಾಮದ ವೇಳೆ ಖಾಲಿ ಇರುವ ಕ್ಲಾಸ್ ರೂಂಗೆ ಕರೆದುಕೊಂಡು ಹೋಗಿ ಅಶ್ಲೀಲ ಹಾವಭಾವ ಮಾಡುವಂತೆ ಒತ್ತಾಯಿಸುತ್ತಿದ್ದರಂತೆ.
ಆರೋಪಿ ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ 19 ವರ್ಷದವಳಾಗಿದ್ದು, ಸತತವಾಗಿ ಫೇಲ್ ಆದ ಕಾರಣ ಇನ್ನೂ 9 ನೇ ತರಗತಿಯಲ್ಲೇ ಇದ್ದಾಳೆಂದು ತಿಳಿದುಬಂದಿದೆ. ಶೋಷಿತ ವಿದ್ಯಾರ್ಥಿನಿಯನ್ನು ಸ್ಥಳೀಯ ಎನ್ ಜಿಒ ಸಂಸ್ಥೆಯೊಂದು ಕೌನ್ಸೆಲಿಂಗ್ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಸರಸಕ್ಕೆ ಕರೆದ ಕಾಮುಕ