Webdunia - Bharat's app for daily news and videos

Install App

ಕೇರಳದಲ್ಲಿ ಮತ್ತೆ 22,000 ಕೇಸ್, ಆದರೂ ನಿರ್ಬಂಧ ಸಡಿಲಿಕೆ!

Webdunia
ಗುರುವಾರ, 5 ಆಗಸ್ಟ್ 2021 (14:53 IST)
ತಿರುವನಂತಪುರಂ(ಆ.05): ಕೇರಳದಲ್ಲಿ ಬುಧವಾರ ಮತ್ತೆ 22414 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 108 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸತತ 7 ದಿನ 20000ಕ್ಕಿಂತ ಹೆಚ್ಚು ಕೇಸ್ ದಾಖಲಾಗಿತ್ತು. ಆದರೆ ಸೋಮವಾರ ಒಂದು ದಿನ ಅದು 13000ಕ್ಕಿಳಿದಿತ್ತಾದರೂ, ಮಂಗಳವಾರ ಮತ್ತೆ 20,000ದ ಗಡಿದಾಟಿತ್ತು.

* ಕೇರಳದಲ್ಲಿ ಬುಧವಾರ ಮತ್ತೆ 22414 ಹೊಸ ಕೋವಿಡ್ ಪ್ರಕರಣ
* ರಾಜ್ಯದಲ್ಲಿ ಸತತ 7 ದಿನ 20000ಕ್ಕಿಂತ ಹೆಚ್ಚು ಕೇಸ್
* ರಾಜ್ಯಾದ್ಯಂತ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲ
ಬುಧವಾರವೂ ಆ ಬೆಳವಣಿಗೆ ಮುಂದುವರೆದಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,71,563ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,76,048ಕ್ಕೆ ತಲುಪಿದೆ. ಈ ನಡುವೆ ರಾಜ್ಯದಲ್ಲಿ ಸೋಂಕು ಏರುಮುಖದಲ್ಲಿದ್ದರೂ, ರಾಜ್ಯ ಸರ್ಕಾರ, ರಾಜ್ಯಾದ್ಯಂತ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟುಸಡಿಲಗೊಳಿಸಿದೆ.
ಬಹುತೇಕ ವಹಿವಾಟು ಮತ್ತು ಪ್ರವಾಸಿ ತಾಣಗಳನ್ನು ವಾರದ 5 ದಿನದ ಬದಲಾಗಿ 6 ದಿನ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಅಂಗಡಿ ಮುಂಗಟ್ಟು ತೆರೆಯುವ ಸಮಯವನ್ನು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ವಿಸ್ತರಿಸಿದೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments