Select Your Language

Notifications

webdunia
webdunia
webdunia
webdunia

‘ಕೊಹ್ಲಿಗಿರುವ ಸೊಕ್ಕು ನೋಡಿದರೆ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ’

‘ಕೊಹ್ಲಿಗಿರುವ ಸೊಕ್ಕು ನೋಡಿದರೆ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ’
Colombo , ಮಂಗಳವಾರ, 8 ಆಗಸ್ಟ್ 2017 (08:55 IST)
ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಠವಾದಿ ನಡತೆಗೆ ಹೆಸರುವಾಸಿ. ಅಂತಿಪ್ಪ ಕೊಹ್ಲಿ ನಡತೆ ನೋಡಿದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ ಎಂದು ಶ್ರೀಲಂಕಾದ ಮಾಜಿ ಆಟಗಾರ ಅರವಿಂದ್ ಡಿ ಸಿಲ್ವಾ ಅಭಿಪ್ರಾಯಪಟ್ಟಿದ್ದಾರೆ.

 
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿ ಸಿಲ್ವಾ ‘ವಿರಾಟ್ ಕೊಹ್ಲಿಗಿರುವ ಸೊಕ್ಕು ನೋಡಿದರೆ  ರಿಚರ್ಡ್ಸ್ ನೆನಪಾಗುತ್ತಾರೆ’ ಎಂದಿದ್ದಾರೆ.

ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್ ಭಾರತೀಯ ಕ್ರಿಕೆಟ್ ನ್ನು ಹೊಸ ದಾರಿಗೆ ತಂದರು. ಕೊಹ್ಲಿ ಅದನ್ನೇ ಮುಂದುವರಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೊಹ್ಲಿಯನ್ನು ನೋಡುವಾಗಲೆಲ್ಲಾ ಆಸ್ಟ್ರೇಲಿಯನ್ನರ ಸೊಕ್ಕನ್ನು ಆಸ್ಟ್ರೇಲಿಯಾದಲ್ಲೇ ಮುರಿದ ರಿಚರ್ಡ್ಸ್ ನೆನಪಾಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ.. ಧೋನಿಯನ್ನು ಹೊಗಳಿದ ಅಭಿಮಾನಿಯ ಕಾಲೆಳದ ಮಹೇಲಾ ಜಯವರ್ಧನೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ಹೊಗಳಿದ ಅಭಿಮಾನಿಯ ಕಾಲೆಳದ ಮಹೇಲಾ ಜಯವರ್ಧನೆ