Publish Date: Fri, 07 Jul 2017 (10:44 IST)
Updated Date: Fri, 07 Jul 2017 (10:47 IST)
ಜಮೈಕಾ: ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಇಂದು 36 ನೇ ಜನ್ಮ ದಿನ. ಈ ಹಿನ್ನಲೆಯಲ್ಲಿ ಅವರ ಸಹ ಆಟಗಾರ ಯುವರಾಜ್ ಸಿಂಗ್ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಟ್ವಿಟರ್ ನಲ್ಲಿ ಧೋನಿಯೊಂದಿಗಿನ ಮಧುರ ಕ್ಷಣದ ಫೋಟೋ ಪ್ರಕಟಿಸಿದ ಯುವಿ ‘ಹ್ಯಾಪಿ ಬರ್ತ್ ಡೇ ಮಿಸ್ಟರ್ ಹೆಲಿಕಾಪ್ಟರ್.. ಇಂದಿನ ದಿನ ಶುಭವಾಗಲಿ. ನಿನಗಾಗಿ ಕೇಕ್ ಕಾಯುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಂಡದ ಆಟಗಾರರೆಲ್ಲಾ ಸೇರಿ ವಿಶೇಷವಾಗಿ ಸಂಭ್ರಮಾಚರಿಸುವ ಸುಳಿವು ನೀಡಿದ್ದಾರೆ.
ಅತ್ತ ಟ್ವಿಟರ್ ಕಿಂಗ್ ವೀರೇಂದ್ರ ಸೆಹ್ವಾಗ್ ಕೂಡಾ ಸ್ಪೆಷಲ್ ಮೆಸೇಜ್ ಮಾಡಿದ್ದಾರೆ. ತಮ್ಮ ಸಂದೇಶದ ಜತೆಗೆ ಇಂದು ಹೆಲಿಕಾಪ್ಟರ್ ದಿನ ಎಂದು ತಮಾಷೆ ಮಾಡಿದ್ದಾರೆ. ಧೋನಿ ಹೆಲಿಕಾಪ್ಟರ್ ಶಾಟ್ ಗಳಿಗೆ ಹೆಸರು ವಾಸಿ. ಈ ಹಿನ್ನಲೆಯಲ್ಲಿ ಅವರ ಸಹವರ್ತಿಗಳು ಈ ರೀತಿ ಗೆಳೆಯನ ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ