Publish Date: Fri, 07 Jul 2017 (10:03 IST)
Updated Date: Fri, 07 Jul 2017 (10:07 IST)
ಜಮೈಕಾ: ಟೀಂ ಇಂಡಿಯಾ ಆಡುವ ಕ್ರಿಕೆಟ್ ಸರಣಿಗೆ ಇಷ್ಟೊಂದು ನೀರಸ ಪ್ರತಿಕ್ರಿಯೆ ಬಹುಶಃ ಎಲ್ಲಿಯೂ ಇರಲಿಲ್ಲವೇನೋ. ಆದರೆ ವೆಸ್ಟ್ ಇಂಡೀಸ್ ನಲ್ಲಿ ಮಾತ್ರ ಖಾಲಿ ಮೈದಾನದಲ್ಲಿ ಟೀಂ ಇಂಡಿಯಾ ಆಡುವಂತಾಗಿದೆ.
ಹೀಗಾಗಿ ಪ್ರೇಕ್ಷಕರ ಕೊರತೆ ನೀಗಿಡಲು ವಿಂಡೀಸ್ ಕ್ರಿಕೆಟ್ ಸಂಸ್ಥೆ ಶಾಲಾ ಮಕ್ಕಳನ್ನು ಮೈದಾನಕ್ಕೆ ಕರೆತಂದಿತು. ಹೀಗಾಗಿ ಮೈದಾನದಲ್ಲಿ ಖಾಲಿ ಹೊಡೆಯುತ್ತಿದ್ದ ಕುರ್ಚಿಗಳು ಸ್ವಲ್ಪವಾದರೂ ತುಂಬಲಿ ಎನ್ನುವುದು ವಿಂಡೀಸ್ ಮಂಡಳಿಯ ಆಶಯ.
ಭಾರತ ಇಲ್ಲಿ ಇನ್ನೂ ಒಂದು ಟಿ-20 ಪಂದ್ಯ ಆಡಬೇಕಿದೆ. ಆ ಪಂದ್ಯಕ್ಕೂ ಶಾಲಾ ಮಕ್ಕಳಿಗೆ ಪ್ರವೇಶ ನೀಡುವುದಾಗಿ ಮಂಡಳಿ ಹೇಳಿದೆ. ಈ ಮೂಲಕ ಖಾಲಿ ಹೊಡೆಯುತ್ತಿದ್ದ ಮೈದಾನಕ್ಕೆ ಮಕ್ಕಳೇ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ