Select Your Language

Notifications

webdunia
webdunia
webdunia
webdunia

ಹರ್ಭಜನ್ ಸಿಂಗ್ ಗೆ ಈಗ ಯುವರಾಜ್ ಸಿಂಗ್ ಸ್ಪೂರ್ತಿ

ಹರ್ಭಜನ್ ಸಿಂಗ್ ಗೆ ಈಗ ಯುವರಾಜ್ ಸಿಂಗ್ ಸ್ಪೂರ್ತಿ
NewDelhi , ಬುಧವಾರ, 18 ಜನವರಿ 2017 (12:26 IST)
ನವದೆಹಲಿ: ಯುವರಾಜ್ ಸಿಂಗ್ ಹಲವು ದಿನಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದು ನೋಡಿ ಹರ್ಭಜನ್ ಸಿಂಗ್ ಕೂಡಾ ಸ್ಪೂರ್ತಿಗೊಂಡಿದ್ದಾರೆ.  ತಾನೂ ಒಂದು ದಿನ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

“ನಾನು ಭಾರತ ತಂಡಕ್ಕೆ ಮರಳಲು ಗಮನ ಕೇಂದ್ರೀಕರಿಸಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ಮತ್ತೆ ಭಾರತ ತಂಡಕ್ಕೆ  ಮರಳಲು ಯಾವುದೇ ಅವಕಾಶ ಸಿಕ್ಕರೂ ಬಳಸಿಕೊಳ್ಳುತ್ತೇನೆ. ಮುಂದಿನ ಚಾಂಪಿಯನ್ಸ್ ಟ್ರೋಫಿಯೇ ನನ್ನ ಗುರಿ. ಇದಕ್ಕಾಗಿ ಪಂಜಾಬ್ ತಂಡ ಮತ್ತು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಠಿಣ ಪರಿಶ್ರಮ ಪಡುತ್ತೇನೆ” ಎಂದು ಭಜಿ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಭಜಿಗೆ ಟೀಂ ಇಂಡಿಯಾದಲ್ಲಿ ಮರಳಿ ಸ್ಥಾನ ಪಡೆದ ಯುವರಾಜ್ ಸ್ಪೂರ್ತಿಯಂತೆ. ಯುವಿ ಒಬ್ಬ ಹೋರಾಟಗಾರ. ಮತ್ತೆ ತಂಡಕ್ಕೆ ಮರಳಲು ಆತ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಅದನ್ನು ಆತ ಸಾಧಿಸಿದ. ಅದಕ್ಕೇ ಮತ್ತೆ ತಂಡದಲ್ಲಿದ್ದಾನೆ ಎಂದು ಹರ್ಭಜನ್ ತಮ್ಮ ಗೆಳೆಯನ ಬಗ್ಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಓಪನ್ ಟೆನಿಸ್ ನಲ್ಲಿ ರೋಹನ್ ಬೋಪಣ್ಣ ಜೋಡಿ ಎರಡನೇ ಸುತ್ತಿಗೆ