Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಹೀಗೆ ಕರೆಯೋದು ಮುಜುಗರವಾಗುತ್ತದೆ ಎಂದ ಯುವರಾಜ್ ಸಿಂಗ್

ಸಚಿನ್ ತೆಂಡುಲ್ಕರ್ ಹೀಗೆ ಕರೆಯೋದು ಮುಜುಗರವಾಗುತ್ತದೆ ಎಂದ ಯುವರಾಜ್ ಸಿಂಗ್
Kolkotta , ಶನಿವಾರ, 21 ಜನವರಿ 2017 (08:43 IST)
ಕೋಲ್ಕೊತ್ತಾ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೊಗಳಿದ್ರೆ ಯಾವುದೇ ಕ್ರಿಕೆಟಿಗನಿಗೂ ಖುಷಿಯಾಗುತ್ತದೆ. ಆದರೆ ಯುವರಾಜ್ ಸಿಂಗ್ ಗೆ ಮಾತ್ರ ಸಚಿನ್ ಹೊಗಳಿದ ರೀತಿ ಮುಜುಗರವಾಗುತ್ತದಂತೆ. ಅಂತಹದ್ದೇನು ಹೇಳಿದ್ರು ಸಚಿನ್?
 

ಕಟಕ್ ನಲ್ಲಿ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ಯುವರಾಜ್ ಸಿಂಗ್ ರನ್ನು ಸಚಿನ್ ಸೂಪರ್ ಸ್ಟಾರ್ ಎಂದಿದ್ದರು. “ಸಚಿನ್ ರಂತಹ ದಿಗ್ಗಜ ಆಗಾಗ ನನ್ನನ್ನು ತಮಾಷೆಯಾಗಿ ಸೂಪರ್ ಸ್ಟಾರ್ ಎನ್ನುವುದು ಮುಜುಗರ ತರುತ್ತದೆ. ನಾನು ಅಷ್ಟೊಂದು ದೊಡ್ಡ ವ್ಯಕ್ತಿಯಲ್ಲ” ಎಂದು ಯುವಿ ಹೇಳಿಕೊಂಡಿದ್ದಾರೆ.

ಆದರೆ ತಮಗೆ ಶುಭ  ಹಾರೈಸಿದ ತೆಂಡುಲ್ಕರ್ ಗೆ ಧನ್ಯವಾದ ತಿಳಿಸುವುದನ್ನು ಮಾತ್ರ ಯುವಿ ಮರೆಯಲಿಲ್ಲ. ಅವರಂತಹವರೇ ತನಗೆ ಸ್ಪೂರ್ತಿ ಎಂದು ಕಟಕ್ ಏಕದಿನದ ಹೀರೋ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಬಾಸ್ ಗಳ ಪಟ್ಟಿ ಉದ್ದವಾಯ್ತು ಎಂದು ತಿರಸ್ಕರಿಸಿ ಸುಪ್ರೀಂಕೋರ್ಟ್