Select Your Language

Notifications

webdunia
webdunia
webdunia
webdunia

ಬಿಸಿಸಿಐ ಬಾಸ್ ಗಳ ಪಟ್ಟಿ ಉದ್ದವಾಯ್ತು ಎಂದು ತಿರಸ್ಕರಿಸಿ ಸುಪ್ರೀಂಕೋರ್ಟ್

ಬಿಸಿಸಿಐ ಬಾಸ್ ಗಳ ಪಟ್ಟಿ ಉದ್ದವಾಯ್ತು ಎಂದು ತಿರಸ್ಕರಿಸಿ ಸುಪ್ರೀಂಕೋರ್ಟ್
NewDelhi , ಶುಕ್ರವಾರ, 20 ಜನವರಿ 2017 (18:02 IST)
ನವದೆಹಲಿ:  ಎಲ್ಲಾ ಸರಿ ಹೋಗಿದ್ದರೆ ಇಂದು ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳ ನೇಮಕವಾಗಬೇಕಿತ್ತು. ಆದರೆ ಸಲಹಾ ಸಮಿತಿ ನೀಡಿದ ಒಂಭತ್ತು ಸದಸ್ಯರ ಹೆಸರಿನ ಪಟ್ಟಿ ಜಾಸ್ತಿಯಾಯ್ತು ಎಂದು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಲು ತಿಳಿಸಿದೆ.
 

ನ್ಯಾಯಾಲಯ ನೇಮಿಸಿದ್ದ ತ್ರಿಸದಸ್ಯರ ಸಮಿತಿ ಬಿಸಿಸಿಐಗೆ ಹೊಸ ಒಂಭತ್ತು ಆಡಳಿತಾಧಿಕಾರಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತು. ಆದರೆ ಇವರಲ್ಲಿ ಇಬ್ಬರು 70 ವರ್ಷ ಮೀರಿದವರ ಹೆಸರೂ ಇದೆ. ಹಾಗೂ ಇಷ್ಟೊಂದು ಸಂಖ್ಯೆಯ ಆಡಳಿತಾಧಿಕಾರಿಗಳ ಅಗತ್ಯವಿಲ್ಲ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಸಮಿತಿಗೆ ಸಲಹೆ ಪರಿಶೀಲಿಸಲು ತಿಳಿಸಿದೆ.

ಸದ್ಯದಲ್ಲೇ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಸ್ವತಂತ್ರ ಸದಸ್ಯರ ಹೆಸರುಗಳನ್ನು ಸೂಚಿಸಲಿದ್ದು ಅವರೇ ಮುಂದೆ ಲೋಧಾ ಸಮಿತಿ ವರದಿ ಜಾರಿಗೆ ತಂದು ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಇದೇ ವೇಳೆ ಅಟಾರ್ನಿ ಜನರಲ್ ಎಜಿ ರೊಹಾಟ್ಗಿ ಸುಪ್ರೀಂ ಕೋರ್ಟ್ ಜನವರಿ 2 ರಂದು ನೀಡಿದ ಆದೇಶವನ್ನು ಪುನರ್ ಪರಿಶೀಲಿಸಲು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶತಕದ ಸಂಭ್ರಮವನ್ನು ಯುವರಾಜ್ ಸಿಂಗ್ ಯಾರ ಜತೆ ಆಚರಿಸಿಕೊಂಡರು ಗೊತ್ತೇ?!