Publish Date: Sun, 28 Mar 2021 (09:21 IST)
Updated Date: Sun, 28 Mar 2021 (09:22 IST)
ಮುಂಬೈ: ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ ಸಚಿನ್ ತೆಂಡುಲ್ಕರ್ ಗೆ ಕೊರೋನಾ ಪಾಸಿಟಿವ್ ವರದಿ ಬಂದಿರುವ ಬೆನ್ನಲ್ಲೇ ಅವರ ಜೊತೆ ಆಡಿದ ಯೂಸುಫ್ ಪಠಾಣ್ ಕೂಡಾ ತಮಗೂ ಕೊರೋನಾ ಸೋಂಕು ತಗುಲಿರುವುದಾಗಿ ಹೇಳಿಕೊಂಡಿದ್ದಾರೆ.
ಸಚಿನ್ ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕೊರೋನಾ ವರದಿ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಯೂಸುಫ್ ಪಠಾಣ್ ಕೂಡಾ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ.
ಇದೀಗ ಯೂಸುಫ್ ಕೂಡಾ ಸಣ್ಣ ಪ್ರಮಾಣದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರಂತೆ. ಸದ್ಯಕ್ಕೆ ಹೋಂ ಕ್ವಾರಂಟೈನಲ್ಲಿರುವ ಯೂಸುಫ್ ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದವರು ಪರೀಕ್ಷೆಗೊಳಪಡಲಿ ಎಂದು ಮನವಿ ಮಾಡಿದ್ದಾರೆ. ಇದರಿಂದಾಗಿ ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ಭಾಗಿಯಾದ ಕ್ರಿಕೆಟಿಗರೆಲ್ಲರೂ ಆತಂಕಕ್ಕೊಳಗಾಗುವಂತಾಗಿದೆ.