Select Your Language

Notifications

webdunia
webdunia
webdunia
Monday, 7 April 2025
webdunia

ಟೀಕಾಕಾರರಿಗೆ ಕಿವಿ ಮುಚ್ಚಿ ತಿರುಗೇಟು ಕೊಟ್ಟ ಕೆಎಲ್ ರಾಹುಲ್

ಕೆಎಲ್ ರಾಹುಲ್
ಪುಣೆ , ಶನಿವಾರ, 27 ಮಾರ್ಚ್ 2021 (09:36 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ ಟೀಕಾಕಾರರಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ.


ಟಿ20 ಸರಣಿಯಲ್ಲಿ ಸತತ ವೈಫಲ್ಯದಿಂದಾಗಿ ರಾಹುಲ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಸಂಭ್ರಮಿಸುವಾಗ ಕಿವಿ ಮುಚ್ಚಿ ಕೆಲ ಕ್ಷಣ ಕಾಲ ನಿಂತರು.

ಇದರ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ಕೆಎಲ್ ರಾಹುಲ್, ‘ಕೆಲವರು ನಿಮ್ಮನ್ನು ಕೆಳಗಿಳಿಯಲೆಂದೇ ಕಾಯುತ್ತಿರುತ್ತಾರೆ. ನಿರಂತರ ಟೀಕೆ ಮಾಡುತ್ತಾರೆ. ನಾನಿಲ್ಲಿ ಯಾರನ್ನೂ ಅಗೌರವಿಸಲು ಬಯಸುವುದಿಲ್ಲ. ಅಂತಹ ಟೀಕಾಕಾರರ ಗದ್ದಲವನ್ನು ಕೇಳಲೂ ಇಷ್ಟಪಡುವುದಿಲ್ಲ.  ಈ ಗದ್ದಲಗಳಿಗೆ ಕಿವಿ ಮುಚ್ಚಿಕೊಂಡು ಬ್ಯಾಟಿನಿಂದಲೇ ಉತ್ತರಿಸುತ್ತೇನೆ ಎನ್ನುವುದೇ ನನ್ನ ಸಂದೇಶ’ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್ ಸೋಲುವುದರಲ್ಲೂ ವಿರಾಟ್ ಕೊಹ್ಲಿ ದಾಖಲೆ