ಕೋಲ್ಕೊತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಅಸಾಮಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೆಂಗಾಳ ಪೊಲೀಸರು ದಾದ ಜೀವಕ್ಕೆ ಕುತ್ತು ತರುವ ಬೆದರಿಕೆ ಹಾಕಿದವನನ್ನು ಬಂಧಿಸಿದ್ದಾರೆ.
ನಿರ್ಮಲ್ಯಾ ಸಮಂತ ಎಂಬ 39 ವರ್ಷದ ವ್ಯಕ್ತಿ ಬಂಧಿತ. ಈತ ಮಿಡ್ನಾಪುರ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ ಆತ ಹೀಗೆ ಮಾಡಲು ಕಾರಣವೇನೆಂದು ಪೊಲೀಸರು ವಿಚಾರಣೆ ನಡೆಸಿದಾಗ ಬಿಚ್ಚಿಟ್ಟ ಸತ್ಯ ಮಾತ್ರ ವಿಚಿತ್ರವಾಗಿದೆ.
ಅಸಲಿಗೆ ಗಂಗೂಲಿ ಜತೆಗೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಚಕ್ರವರ್ತಿ ಭಾಗವಹಿಸುತ್ತಾರೆಂದು ನಿಗದಿಯಾಗಿತ್ತು. ಆದರೆ ಆತನಿಗೆ ಶಾಸಕರು ಬರುವುದು ಇಷ್ಟವಿರಲಿಲ್ಲ. ದಾದ ಜತೆಗೆ ಆ ಶಾಸಕನನ್ನು ನೋಡಲು ಇಷ್ಟವೇ ಇರಲಿಲ್ಲವಂತೆ.
ಅದಕ್ಕಾಗಿ ದಾದ ನಿಗೆ ಕೊಲೆ ಬೆದರಿಕೆ ಪತ್ರ ಬರೆದರೆ ಅವರು ಖಂಡಿತಾ ಕಾರ್ಯಕ್ರಮಕ್ಕೆ ಬರುವುದಿಲ್ಲ. ಆಗ ಕಾರ್ಯಕ್ರಮವೂ ರದ್ದಾಗುತ್ತದೆ. ತನ್ನ ಉದ್ದೇಶವೂ ಈಡೇರಿದಂತಾಗುತ್ತದೆ. ಹೀಗಾಗಿ ಗಂಗೂಲಿಗೆ ಕೊರಿಯರ್ ನಲ್ಲಿ ಬೆದರಿಕೆ ಪತ್ರ ಕಳುಹಿಸಿಯೇ ಬಿಟ್ಟ. ಕಳ್ಳನ ಐಡಿಯಾ ನೋಡಿ ಪೊಲೀಸರಿಗೇ ಏನು ಹೇಳಬೇಕೆಂದು ತೋಚುತ್ತಿಲ್ಲವಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ