ಇಂಧೋರ್: 65 ವರ್ಷಗಳ ನಂತರ ರಣಜಿ ಟ್ರೋಫಿ ಫೈನಲ್ ತಲುಪಿರುವ ಗುಜರಾತ್ ಕ್ರಿಕೆಟ್ ತಂಡ, ಟ್ರೋಫಿ ಗೆಲ್ಲಲು ಇನ್ನು ಕೆಲವೇ ಹೆಜ್ಜೆಗಳ ದೂರದಲ್ಲಿದೆ. ಮುಂಬೈ ವಿರುದ್ಧ ಗೆಲುವಿಗೆ ಇನ್ನು 265 ರನ್ ಗಳಸಿದರೆ ಸಾಕು.
ದಿನದಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೇ47 ರನ್ ಗಳಿಸಿದೆ. ಪ್ರಿಯಾಂಕ್ ಪಂಚಾಲ್ 37 ರನ್ ಗಳಿಸಿ ಕ್ರೀಸ್ ನಲ್ಲಿದ್ದರೆ, ಸಮಿತ್ ಗೊಹೆಲ್ 8 ರನ್ ಗಳಿಸಿ ಅವರಿಗೆ ಸಾಥ್ ನೀಡಲಿದ್ದಾರೆ. ಇದಕ್ಕೂ ಮೊದಲು ದ್ವಿತೀಯ ಇನಿಂಗ್ಸ್ ನಲ್ಲಿ ಮುಂಬೈ 411 ರನ್ ಗಳಿಸಿ ಆಲೌಟ್ ಆಯಿತು.
ಮೊದಲ ಇನಿಂಗ್ಸ್ ನಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿದ್ದು, ಮುಂಬೈಗೆ ನಷ್ಟವಾಯಿತು. ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಹಿರಿಯ ಆಟಗಾರ ಅಭಿಷೇಕ್ ನಾಯರ್ 91 ರನ್ ಗಳಿಸಿ ತಂಡಕ್ಕೆ ನೆರವಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಕ್ಕೇ ಪೈಪೋಟಿಯುತ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
ಆದರೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿರುವ ಗುಜರಾತ್ ತಪ್ಪು ಮಾಡುವ ಲಕ್ಷಣ ಕಾಣುತ್ತಿಲ್ಲ. ಈ ಬಾರಿ ರಣಜಿ ಗೆದ್ದು ಇತಿಹಾಸ ಬರೆಯುವ ಉತ್ಸಾಹದಲ್ಲಿ ಪಾರ್ಥಿವ್ ಪಟೇಲ್ ಪಡೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ