ವೀರೇಂದ್ರ ಸೆಹ್ವಾಗ್ ಮೊದಲ ದಿನದ ಕಾಮೆಂಟರಿ ತಪ್ಪಿಸಿಕೊಂಡಿದ್ದೇಕೆ?

ಶನಿವಾರ, 17 ಡಿಸೆಂಬರ್ 2016 (08:29 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ನ ಮೊದಲ ದಿನ ಕಾಮೆಂಟರಿ ಬಾಕ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ಕಂಡುಬರಲಿಲ್ಲ. ಯಾವತ್ತೂ ತಮಾಷೆಯಾಗಿ ಕಾಮೆಂಟರಿ ಮಾಡಿಕೊಂಡು ಮೈದಾನದಲ್ಲಿರುವ ಆಟಗಾರರಿಗಿಂತ ಹೆಚ್ಚು ಮನರಂಜನೆ ಒದಗಿಸುವ ವೀರೂ ಈವತ್ತು ಎಲ್ಲಿ ಹೋದರು ಎಂದು ಎಲ್ಲರೂ ಹುಡುಕಿದ್ದೇ ಬಂತು.

ಹಾಗಿದ್ದರೆ ವೀರೂ ಎಲ್ಲಿದ್ದರು? ನಿಜ ಹೇಳಬೇಕೆಂದರೆ ನಿನ್ನೆ ಅವರ ಪತ್ನಿ ಆರತಿಯ ಬರ್ತ್ ಡೇ. ಹೀಗಾಗಿ ವೀರೂ ಪತ್ನಿಯ ಬರ್ತ್ ಡೇ ಆಚರಿಸುವುದರಲ್ಲಿ ಬ್ಯುಸಿಯಾಗಿದ್ದರು.ಎಲ್ಲರಿಗೂ ಟ್ವಿಟರ್ ನಲ್ಲಿ ತಮಾಷೆಯಾಗಿ ಹುಟ್ಟು ಹಬ್ಬದ ಸಂದೇಶ ನೀಡುವ ಸೆಹ್ವಾಗ್ ಪತ್ನಿಯನ್ನೂ ಬಿಟ್ಟಾರೆಯೇ?

ಹ್ಯಾಪೀ ಬರ್ತ್ ಡೇ ಬೀವೀ ಜೀ. ನಿಜವಾದ ಪ್ರೀತಿ ಮತ್ತು 100 ನೋಟು ಕಷ್ಟದಲ್ಲಿ ಸಿಗೋದು ಎಂದು ಟ್ವೀಟ್ ಮಾಡಿದ್ದಾರೆ. ಈ ಫನ್ನಿ ಟ್ವೀಟ್ ಗೆ 5000 ಲೈಕ್ಸ್ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿರಿಯರ ವಿಶ್ವಕಪ್ ಫೈನಲ್ ಗೆ ಭಾರತ