Select Your Language

Notifications

webdunia
webdunia
webdunia
webdunia

ಕಿರಿಯರ ವಿಶ್ವಕಪ್ ಫೈನಲ್ ಗೆ ಭಾರತ

ಕಿರಿಯರ ವಿಶ್ವಕಪ್ ಫೈನಲ್ ಗೆ ಭಾರತ
Luknow , ಶುಕ್ರವಾರ, 16 ಡಿಸೆಂಬರ್ 2016 (21:19 IST)
ಲಕ್ನೋ: ತವರಿನ ಲಾಭ, ಆಕ್ರಮಣಕಾರಿ ಆಟ, ಉತ್ಸಾಹಿ ತಂಡ.. ಇದೆಲ್ಲದರ ಲಾಭ ಪಡೆದ ಭಾರತದ ಹುಡುಗರು ಕಿರಿಯರ ವಿಶ್ವಕಪ್ ಹಾಕಿ ಫೈನಲ್ ಗೇರಿದ್ದಾರೆ. ಆಸ್ಟ್ರೇಲಿಯಾವನ್ನು ಸೆಮಿಫೈನಲ್ ನಲ್ಲಿ 4-2 ಅಂತರದಿಂದ ಸೋಲಿಸಿ ಭಾರತ ಈ ಸಾಧನೆ ಮಾಡಿದೆ.

ಪಂದ್ಯದ 70 ನೇ ನಿಮಿಷದಲ್ಲಿ ಮನ್ ದೀಪ್ ಮತ್ತು ಗುಜ್ರಾಂತ್ ಸಿಂಗ್ ಹೊಡೆದ ತಲಾ ಒಂದೊಂದು ಗೋಲುಗಳ ನೆರವಿನಿಂದ ಉಭಯ ತಂಡಗಳು 2-2 ಅಂತರದಿಂದ ಸಮಬಲ ಸಾಧಿಸಿತ್ತು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ ಪಂದ್ಯ ತನ್ನದಾಗಿಸಿಕೊಂಡಿತು.

15 ವರ್ಷಗಳ ನಂತರ ಭಾರತ ಕಿರಿಯರ ವಿಶ್ವಕಪ್ ಫೈನಲ್ ತಲುಪಿದೆ. ಫೈನಲ್ ನಲ್ಲಿ ಅದು ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೆಪಾಕ್ ಚಿಪ್ಪಿನೊಳಗೆ ಹುದುಗಿದೆ ರನ್ ಮಳೆ