Select Your Language

Notifications

webdunia
webdunia
webdunia
webdunia

ಲತಾ ಮಂಗೇಶ್ಕರ್ ಜತೆ ಮಾತಾಡಿದ್ದಕ್ಕೆ ರೋಮಾಂಚನಗೊಂಡರಂತೆ ಅಕ್ತರ್

Shoaib Akhtar
ಕರಾಚಿ , ಶನಿವಾರ, 3 ಸೆಪ್ಟಂಬರ್ 2016 (16:00 IST)
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಕ್ತರ್ ಶುಕ್ರವಾರ ತಮ್ಮ ಸ್ನೇಹಿತರು ಮತ್ತು ಫಾಲೋವರ್ಸ್‌ಗಳೊಂದಿಗೆ ಟ್ವಿಟರ್‌ನಲ್ಲಿ ಬಹಳ ಅಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನ ಹೆಸರಾಂತ ಗಾಯಕಿ, ಗೀತ ಸಾಮ್ರಾಜ್ನಿ ಲತಾ ಮಂಗೇಶ್ಕರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ವಿವರಗಳನ್ನು ಅವರು ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ. 
 
ಫೋನ್‌ನಲ್ಲಿ ಕೂಡ ಅವರ ಧ್ವನಿ ಮಧುರವಾಗಿ ಕೇಳಿ ಬಂತು.  ಪಾಕಿಸ್ತಾನಿ ಗಾಯಕಿ ನೂರ್ ಜಹಾನ್ ಬಗ್ಗೆ ಅವರು ಮಾತನಾಡುವಾಗಲಂತೂ ನನಗೆ ರೋಮಾಂಚನವಾಯಿತು ಎಂದವರು ಹೇಳಿದ್ದಾರೆ.
 
ತಮ್ಮ ಸ್ವಂತ ಸಹೋದರಿ ಎನ್ನುವಂತೆ ನೂರ್ ಬಗ್ಗೆ ಲತಾ ಅವರು ಮಾತನ್ನಾಡುತ್ತಿದ್ದರು ಎಂದಿರುವ ಅಕ್ತರ್ ಭಾರತೀಯ ಗಾಯಕಿಯನ್ನು ಮನಸಾರೆ ಶ್ಲಾಘಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ ಎಬಿಡಿ ಆತ್ಮಕಥೆ