Publish Date: Sat, 14 Jan 2017 (12:34 IST)
Updated Date: Sat, 14 Jan 2017 (12:42 IST)
ಮುಂಬೈ: ಯಾರು ನಾಯಕೋತ್ತಮರು? ವಿರಾಟ್ ಕೊಹ್ಲಿಯಾ? ಎಂಎಸ್ ಧೋನಿಯಾ? ಎನ್ನುವ ಚರ್ಚೆ ಹಲವು ದಿನಗಳಿಂದಲೂ ನಡೆಯುತ್ತಿತ್ತು. ಆದರೆ ಧೋನಿ ಮಾತ್ರ ಕೊಹ್ಲಿ ನನಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಲಿದ್ದಾರೆ ಎಂದಿದ್ದಾರೆ.
ಆತ ನನಗಿಂತ ಹೆಚ್ಚು ಪಂದ್ಯಗಳನ್ನು ಭಾರತಕ್ಕಾಗಿ ಗೆದ್ದು ಕೊಡಲಿದ್ದಾನೆ. ಈ ತಂಡ ಇತಿಹಾಸವನ್ನು ಮರಳಿ ಬರೆಯಲಿದೆ. ಆ ಸಾಮರ್ಥ್ಯ ಅವರಿಗಿದೆ ಎಂದು ಧೋನಿ ತನ್ನ ನಂತರದ ನಾಯಕನನ್ನು ಹೊಗಳಿದ್ದಾರೆ.
ಧೋನಿಯಿಂದ ನಾಯಕತ್ವ ಪಡೆದ ನಂತರ ಕೊಹ್ಲಿ ಟೆಸ್ಟ್ ಮಾದರಿಗಳಲ್ಲಿ 21 ಪಂದ್ಯಗಳಲ್ಲಿ 14 ಜಯ ಗಳಿಸಿದ್ದಾರೆ. ಕೇವಲ ಒಂದೇ ಸೋಲು ಕಂಡಿದೆ. ಕೊಹ್ಲಿ ಬಳಿ ಒತ್ತಡಗಳನ್ನು ನಿಭಾಯಿಸಬಲ್ಲ, ಎಂತಹ ಪರಿಸ್ಥಿತಿಯಲ್ಲೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಯುವ ಆಟಗಾರರಿದ್ದಾರೆ. ಆ ಕಾರಣಕ್ಕೆ ಕೊಹ್ಲಿಗೆ ನನ್ನಿಂದ ಹೆಚ್ಚು ಜಯ ಗಳಿಸಲು ಸಾಧ್ಯ ಎಂಬುದು ಧೋನಿ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ