Publish Date: Sat, 14 Jan 2017 (12:25 IST)
Updated Date: Sat, 14 Jan 2017 (12:28 IST)
ಮುಂಬೈ: ನಾಯಕತ್ವ ತ್ಯಜಿಸಿದ ಮೇಲೆ ನಿರಾಳವಾಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯಕ್ಕೆ ನೆಟ್ ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲಿಗೆ ತಾನು ಯಾವುದೇ ಸವಾಲಿಗೂ ಸಿದ್ಧ ಎಂದು ಸಂದೇಶ ಕೊಟ್ಟಿದ್ದಾರೆ.
ಸದ್ಯಕ್ಕೆ ಯಾವುದೇ ಒತ್ತಡಗಳಿಲ್ಲದೆ ಕೂಲ್ ಆಗಿರುವ ಅವರು ಸಹ ಆಟಗಾರರಿಗೆ ಬೌಲಿಂಗ್ ಮಾಡಿ ಖುಷಿಪಟ್ಟರು. ಹಿಂದೆಯೂ ಹಲವು ಪಂದ್ಯಗಳಲ್ಲಿ ಧೋನಿ ಕೆಲ ಹೊತ್ತು ಕೀಪಿಂಗ್ ಗ್ಲೌಸ್ ಕಳಚಿಟ್ಟು ಬೌಲಿಂಗ್ ಮಾಡಿದ್ದೂ ಇದೆ.
ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಯಾರಾಗುತ್ತಿರುವ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ನಡೆಸಿ ತಾವೂ ಒಂದಷ್ಟು ಸಜ್ಜಾದರು. ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಧೋನಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದು, ಭಾರತದ ಹೊಸ ಬೌಲರ್? ಯಾರು ಗೊತ್ತಾ? ಎಂದು ಅಡಿಬರಹ ಕೊಟ್ಟಿದೆ. ಈ ವಿಡಿಯೋ ಈಗ ಭಾರೀ ಹಿಟ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ