Publish Date: Fri, 23 Dec 2016 (17:32 IST)
Updated Date: Fri, 23 Dec 2016 (17:34 IST)
ಚೆನ್ನೈ: ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಪಡೆದ ರವಿಚಂದ್ರನ್ ಅಶ್ವಿನ್ ಈ ವರ್ಷ ಒಟ್ಟಾರೆ 48 ವಿಕೆಟ್ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 248 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರಿಗೆ ಅತ್ಯುತ್ತಮ ಎನಿಸಿದ ವಿಕೆಟ್ ಯಾವುದು ಎಂಬುದಕ್ಕೆ ಅವರು ಉತ್ತರ ನೀಡಿದ್ದಾರೆ.
ಟ್ವಿಟರ್ ನಲ್ಲಿ ತಮ್ಮ ಬೆಸ್ಟ್ ವಿಕೆಟ್ ಯಾವುದೆಂದು ಅಭಿಮಾನಿಗಳೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, ಅದು ನಾಗ್ಪುರದಲ್ಲಿ ದ. ಆಫ್ರಿಕಾ ತಂಡದ ಎಬಿಡಿ ವಿಲಿಯರ್ಸ್ ಬಲಿ ಪಡೆದ ವಿಕೆಟ್ ಅತ್ಯುತ್ತಮವಾದುದು ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಎಬಿಡಿಯನ್ನು ಅಶ್ವಿನ್ ಔಟ್ ಮಾಡಿದ್ದರು. ಈ ಪಂದ್ಯವನ್ನು ಟೀಂ ಇಂಡಿಯಾ 124 ರನ್ ಗಳಿಂದ ಗೆದ್ದುಕೊಂಡಿತ್ತು. ಇದೇ ರವಿಚಂದ್ರನ್ ಗೆ ಪೆವಿಲಿಯನ್ ನಲ್ಲಿ ನಡೆಸುವ ಎಲ್ಲಾ ಕುಕೃತ್ಯಗಳಿಗೆ ಸಾಥ್ ನೀಡುವುದು ಕೆಎಲ್ ರಾಹುಲ್ ಮತ್ತು ಚೇತೇಶ್ವರ ಪೂಜಾರ ಅವರಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ