Publish Date: Fri, 23 Dec 2016 (17:17 IST)
Updated Date: Fri, 23 Dec 2016 (17:19 IST)
ಸಿಡ್ನಿ: ಅರೇ.. ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಹೋದರೆ ಟೀಂ ಇಂಡಿಯಾ ಗತಿಯೇನು? ಗಾಬರಿಯಾಗಬೇಕಿಲ್ಲ. ಕೊಹ್ಲಿ ನಾಯಕನಾಗಿದ್ದು, ಆಡುವ ಬಳಗಕ್ಕಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದ ಟೆಸ್ಟ್ ತಂಡಕ್ಕೆ.
ಆದರೆ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತನ್ನದೇ ದೇಶದ ಡೇವಿಡ್ ವಾರ್ನರ್ ರನ್ನು ಆಸ್ಟ್ರೇಲಿಯಾ ಕಡೆಗಣಿಸಿದೆ. ಆಸಿಸ್ ಟೆಸ್ಟ್ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಬಿಡುಗಡೆಗೊಳಿಸಿದ ಆಟಗಾರರ ಪೈಕಿ ಆರು ಬದಲಾವಣೆ ಈ ತಂಡದಲ್ಲಿದೆ.
ಆದರೆ ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿರಾಟ್ ಸ್ಥಾನ ಪಡೆಯದೇ ಇರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಬಿಡುಗಡೆ ಮಾಡಿ, ಅದರಲ್ಲೂ ಕೊಹ್ಲಿಯನ್ನೇ ನಾಯಕನನ್ನಾಗಿಸಿರುವುದು ಅಚ್ಚರಿ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ