Publish Date: Fri, 23 Dec 2016 (17:05 IST)
Updated Date: Fri, 23 Dec 2016 (17:07 IST)
ಮುಂಬೈ: ಜನವರಿ 2 ರವರೆಗೆ ಕಾಯಿರಿ. ನಂತರ ಭಾರತೀಯ ಕ್ರಿಕೆಟ್ ನಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಅದೇನೆಂದು ಕಾದು ನೋಡಿ ಎಂದು ಭಾರತೀ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿಕೊಂಡಿದ್ದಾರೆ.
ಅದೇನೆಂದರೆ ಜನವರಿ 2, 3 ರಂದು ಸುಪ್ರೀಂ ಕೋರ್ಟ್ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ. ಈ ಸಂದರ್ಭದಲ್ಲಿ ಈಗಿರುವ ಹಣಕಾಸಿನ ಕಟ್ಟಪಾಡುಗಳು, ಬಿಸಿಸಿಐ ಮೇಲೆ ಲೋಧಾ ಸಮಿತಿಯ ಅಂಕುಶ ಕೊನೆಗೊಳ್ಳಬಹುದು ಎಂಬುದು ಠಾಕೂರ್ ವಿಶ್ವಾಸ.
ಆದರೆ ಠಾಕೂರ್ ಹೇಳುವಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಐಸಿಸಿಗೆ ಲೋಧಾ ಸಮಿತಿ ವರದಿ ಜಾರಿ ಮಾಡಬೇಕೇ ಎಂದು ಕೇಳಿಕೊಂಡಿರುವುದಾಗಿ ಠಾಕೂರ್ ತಪ್ಪು ಹೇಳಿಕೆ ನೀಡಿರುವುದು ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಇದುವರೆಗಿನ ವಿಚಾರಣೆಗಳಲ್ಲಿ ಬಿಸಿಸಿಐ ಪರವಾದ ತೀರ್ಪು ಬಂದಿಲ್ಲ. ಹೀಗಾಗಿ ಎಲ್ಲವೂ ಹೇಳಿದಷ್ಟು ಸುಲಭವಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ