Publish Date: Tue, 08 Aug 2017 (10:45 IST)
Updated Date: Tue, 08 Aug 2017 (10:48 IST)
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತದೆ. ಅದಕ್ಕೆ ಅವರ ಪ್ರತಿಕ್ರಿಯೆ ಏನು ಗೊತ್ತಾ?
ತಮ್ಮ ಟ್ವಿಟರ್ ಪೇಜ್ ನಲ್ಲಿ ಲೈವ್ ಸಂಭಾಷಣೆ ನಡೆದಿದ್ದ ಬಾಬರ್ ಗೆ ಅಭಿಮಾನಿಯೊಬ್ಬರು ನಿಮ್ಮನ್ನು ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದು ಕರೆಯುತ್ತಾರಲ್ಲ? ಹೇಗನಿಸುತ್ತೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಬಾಬರ್ ‘ನನ್ನನ್ನು ಕೊಹ್ಲಿ ಜತೆ ಹೋಲಿಸಬೇಡಿ. ಕೊಹ್ಲಿ ಅನುಭವಿ ಆಟಗಾರ. ನಾನಿನ್ನೂ ಹೊಸಬ. ಅಷ್ಟಕ್ಕೂ ನನಗೆ ಪಾಕಿಸ್ತಾನದ ಬಾಬರ್ ಅಜಮ್ ಎಂದು ಮಾತ್ರ ಕರೆಯಿಸಿಕೊಳ್ಳಲು ಇಷ್ಟ’ ಎಂದು ಉತ್ತರಿಸಿದ್ದಾರೆ.