Publish Date: Tue, 08 Aug 2017 (10:29 IST)
Updated Date: Tue, 08 Aug 2017 (10:32 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಳಗದ ಎದುರು ಕೋಚ್ ರವಿಶಾಸ್ತ್ರಿ ಹೊಸ ಬೇಡಿಕೆಯಿಟ್ಟಿದ್ದಾರೆ.
ಶ್ರೀಲಂಕಾ ಸರಣಿ ಗೆಲ್ಲುವುದರೊಂದಿಗೆ ಸತತ 8 ಸರಣಿಗಳನ್ನು ಗೆದ್ದ ವಿರಾಟ್ ಪಡೆದ ಆಸ್ಟ್ರೇಲಿಯಾದ ಗರಿಷ್ಠ ಸತತ ಸರಣಿ ಗೆಲುವು ದಾಖಲೆ ಮುರಿಯಲು ಇನ್ನೊಂದು ಸರಣಿ ಗೆದ್ದರೆ ಸಾಕು.
ಅದರ ಜತೆಗೆ ಶ್ರೀಲಂಕಾ ಸರಣಿಯಲ್ಲಿ ಎರಡು ಬಾರಿ 600 ಪ್ಲಸ್ ರನ್ ಸ್ಕೋರ್ ಮಾಡಿದ್ದ ಟೀಂ ಇಂಡಿಯಾ 29 ನೇ ಬಾರಿ ಈ ಸಾಧನೆ ಮಾಡಿತು. ಆಸ್ಟ್ರೇಲಿಯಾ 32 ಬಾರಿ 600 ಪ್ಲಸ್ ರನ್ ಸ್ಕೋರ್ ಮಾಡಿ ಮೊದಲ ಸ್ಥಾನ ಹೊಂದಿದೆ.
ರವಿಶಾಸ್ತ್ರಿ ಇವೆರಡೂ ದಾಖಲೆಗಳನ್ನು ವಿರಾಟ್ ಪಡೆ ಮುರಿಯಬೇಕೆಂದು ಆಗ್ರಹಿಸಿದ್ದಾರೆ. ಈ ತಂಡಕ್ಕೆ ಆ ಸಾಮರ್ಥ್ಯವಿದೆ. ಅದನ್ನು ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.