Publish Date: Fri, 12 Mar 2021 (09:42 IST)
Updated Date: Fri, 12 Mar 2021 (09:44 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರಾಗುತ್ತಾರೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ.
ಇದರ ನಡುವೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೆಎಲ್ ರಾಹುಲ್ ಗೆ ಮಣೆ ಹಾಕಿದ್ದಾರೆ. ಧವನ್ ಗಿಂತ ರಾಹುಲ್ ಆರಂಭಿಕರಾಗುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ಆರಂಭಿಕನನ್ನು ನಿರ್ಧರಿಸುವುದು ಉತ್ತಮ. ಧವನ್ ಐಪಿಎಲ್ ನಲ್ಲಿ ಉತ್ತಮ ರನ್ ಗಳಿಸಿದ್ದಾರೆ. ಆದರೆ ರಾಹುಲ್ ಟಿ20 ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್ ಗೆ ರಾಹುಲ್ ಆರಂಭಿಕರಾಗುವುದು ಸೂಕ್ತ. ಒಂದು ವೇಳೆ ರೋಹಿತ್ ಅಥವಾ ರಾಹುಲ್ ಗೆ ಗಾಯವಾದರೆ ಧವನ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.