Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ರನ್ನು ಬಿಟ್ಟು ಬಿಡಿ! ರೋಹಿತ್ ಶರ್ಮಾ ಮನವಿ

ರಿಷಬ್ ಪಂತ್ ರನ್ನು ಬಿಟ್ಟು ಬಿಡಿ! ರೋಹಿತ್ ಶರ್ಮಾ ಮನವಿ
ಅಹಮ್ಮದಾಬಾದ್ , ಶುಕ್ರವಾರ, 12 ಮಾರ್ಚ್ 2021 (09:31 IST)
ಅಹಮ್ಮದಾಬಾದ್: ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ನಲ್ಲೇ ಅವರ ಮೇಲೆ ನಿರೀಕ್ಷೆಯ ಭಾರ ಅತಿಯಾಗಿದೆ.


ಯಶಸ್ಸು ಸಿಗುತ್ತಿದ್ದಂತೇ ರಿಷಬ್ ಪಂತ್ ರನ್ನು ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸುವ ಕೆಲಸವೂ ನಡೆಯುತ್ತಿದೆ. ಆದರೆ ಇದರಿಂದ ಅವರ ಮೇಲೆ ಅತಿಯಾದ ಒತ್ತಡ ಉಂಟಾಗುತ್ತಿದೆ.

ಈ ಬಗ್ಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ರೋಹಿತ್ ಶರ್ಮಾ ಕೂಡಾ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ. ‘ಅವರನ್ನು ರಿಷಬ್ ಪಂತ್ ಆಗಿಯೇ ಇರಲು ಬಿಡಿ.  ಅವರು ನಿಮ್ಮ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಾರೆ. ಅವರು ಅವರಾಗಿಯೇ ಇರುವುದು ಅವರ ಪಾಲಿಗೆ ಉತ್ತಮ. ನಾವು ಕೂಡಾ ಅದನ್ನೇ ಮಾಡುತ್ತಿದ್ದೇವೆ’ ಎಂದು ರೋಹಿತ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ನಲ್ಲಿ ಭರ್ಜರಿ ದಾಖಲೆ ಮಾಡಲು ಸಿದ್ಧರಾದ ವಿರಾಟ್ ಕೊಹ್ಲಿ