ಬೌಲರ್ ಗಳ ಎದೆ ನಡುಗಿಸಿದ್ದ ವೀರೇಂದ್ರ ಸೆಹ್ವಾಗ್ ಈಗ ಮಕ್ಕಳನ್ನು ನೋಡುವ ಆಯಾ!

ಸೋಮವಾರ, 11 ಫೆಬ್ರವರಿ 2019 (10:39 IST)
ನವದೆಹಲಿ: ಅರೇ... ಇದೇನು ಅಂದುಕೊಳ್ಳಬೇಡಿ. ಆದರೆ ವಿಶ್ವದ ಘಟಾನುಘಟಿ ಬೌಲರ್ ಗಳ ಎದೆ ನಡುಗಿಸಿದ್ದ ವೀರೇಂದ್ರ ಸೆಹ್ವಾಗ್ ಈಗ ಮಕ್ಕಳನ್ನು ನೋಡಿಕೊಳ್ಳುವ ಆಯಾ ಆಗಿರುವುದು ನಿಜ!


ಆದರೆ ಅದು ಒಂದು ಜಾಹೀರಾತಿಗೆ ಮಾತ್ರ. ಸ್ಟಾರ್ ಸ್ಪೋರ್ಟ್ ವಾಹಿನಿಯ ಜಾಹೀರಾತೊಂದಕ್ಕಾಗಿ ಸೆಹ್ವಾಗ್ ಬೇಬಿ ಸಿಟ್ಟರ್ ಆಗಿದ್ದಾರೆ. ಇದುವರೆಗೆ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾ ನಾಯಕ ಬೇಬಿ ಸಿಟ್ಟರ್ ಎಂದು ಸ್ಲೆಡ್ಜ್ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಸೆಹ್ವಾಗ್ ಬೇಬಿ ಸಿಟ್ಟರ್ ಆಗಿದ್ದಾರೆ.

ವಿಶೇಷವೆಂದರೆ ಈ ಜಾಹೀರಾತಿನಲ್ಲಿ ರಿಷಬ್ ಪಂತ್-ಟಿಮ್ ಪೇಯ್ನ್ ಸ್ಲೆಡ್ಜಿಂಗ್ ಘಟನೆಯನ್ನೇ ಸೆಹ್ವಾಗ್ ನೆನಪಿಸುತ್ತಾರೆ. ಈ ಜಾಹೀರಾತಿನಲ್ಲಿ ಆಸ್ಟ್ರೇಲಿಯಾ ಸಮವಸ್ತ್ರ ಧರಿಸಿದ ಪುಟಾಣಿಗಳನ್ನು ಸೆಹ್ವಾಗ್ ನಿಭಾಯಿಸುವ ಫನ್ನಿ ದೃಶ್ಯಗಳಿವೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ ಟಿ20 ಸರಣಿ ಸೋಲಿಗೆ ಅಂಪಾಯರ್ ಕೂಡಾ ಕಾರಣ!