Select Your Language

Notifications

webdunia
webdunia
webdunia
webdunia

ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ವಿರೇಂದ್ರ ಸೆಹ್ವಾಗ್!

ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ವಿರೇಂದ್ರ ಸೆಹ್ವಾಗ್!
ನವದೆಹಲಿ , ಸೋಮವಾರ, 9 ಜನವರಿ 2017 (09:10 IST)
ನವದೆಹಲಿ: ಟ್ವಿಟರ್ ನಲ್ಲಿ ಸದಾ ಇನ್ನೊಬ್ಬ ಕಾಲ ಎಳೆಯುವ ಸೆಹ್ವಾಗ್ ಈಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾರೆ. ಆನ್ ಲೈನ್ ಸುದ್ದಿ ವಾಹಿನಿಯೊಂದರ ಕಾಲಳೆಯಲು ಹೋಗಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ.

ಎಮಿರೇಟ್ಸ್ ಎಂಬ ಹೆಸರು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು. ಎಮಿರೇಟ್ಸ್ 24/7 ಎಂಬ ಆನ್ ಲೈನ್ ಸುದ್ದಿ ವಾಹಿನಿಯೊಂದು ಧೋನಿ ಸ್ಥಾನಕ್ಕೆ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಮಾಡಿರುವ ಸುದ್ದಿಯನ್ನು ಪ್ರಕಟಿಸುವಾಗ ಧೋನಿ ಬದಲಿಗೆ ಅವರ ಬಯೋಗ್ರಫಿ ಸಿನಿಮಾದಲ್ಲಿ ಪಾತ್ರ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್ ಚಿತ್ರ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿತ್ತು.

ಈ ಎಡವಟ್ಟನ್ನು ತಮಾಷೆ ಮಾಡುವ ಸಂದೇಶದಲ್ಲಿ ಸೆಹ್ವಾಗ್ ಎಮಿರೇಟ್ಸ್ 24/7 ಎನ್ನುವ ಬದಲು ಎಮಿರೇಟ್ಸ್ ಏರ್ ಲೈನ್ಸ್ ಎಂದು ಟ್ಯಾಗ್ ಮಾಡಿ ನಗೆಪಾಟಲಿಗೀಡಾದರು. ವೀರೂ ಮಾಡಿದ ಈ ಅವಾಂತರ ಟ್ವಿಟರ್ ನಲ್ಲಿ ಭಾರೀ ಸುದ್ದಿ ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ವೀರೇಂದ್ರ ಸೆಹ್ವಾಗ್