Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್-ಧೋನಿ ಆಟವನ್ನು ಅಪನಗದೀಕರಣಕ್ಕೆ ಹೋಲಿಸಿದ ವೀರೇಂದ್ರ ಸೆಹ್ವಾಗ್

ಯುವರಾಜ್ ಸಿಂಗ್-ಧೋನಿ ಆಟವನ್ನು ಅಪನಗದೀಕರಣಕ್ಕೆ ಹೋಲಿಸಿದ ವೀರೇಂದ್ರ ಸೆಹ್ವಾಗ್
Cuttack , ಶುಕ್ರವಾರ, 20 ಜನವರಿ 2017 (10:00 IST)
ಕಟಕ್: ವೀರೇಂದ್ರ ಸೆಹ್ವಾಗ್ ಅಂದರೆ ಹಾಗೇನೇ. ಅವರೇ ಬೇರೆ ಅವರ ಸ್ಟೈಲೇ ಬೇರೆ. ಈ ಬಾರಿಯೂ ಹಾಗೇ.  ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಹಳೇ ಆಟಗಾರರಾದ ಯುವಿ-ಮಹಿ ಜೋಡಿ ಆಟವನ್ನು ಅವರು ದೇಶದಲ್ಲಿ ಇತ್ತೀಚೆಗೆ ಜಾರಿಗೊಂಡ ಹಳೇ ನೋಟುಗಳ ನಿಷೇಧಕ್ಕೆ ಹೋಲಿಕೆ ಮಾಡಿದ್ದಾರೆ.
 

500, 1000 ರೂ. ನೋಟುಗಳ ಅಪನಗದೀಕರಣಕ್ಕೆ ಹೋಲಿಸಿ ಯುವರಾಜ್ ಮತ್ತು ಧೋನಿ ಆಟವನ್ನು ಹೊಗಳಿದ್ದಾರೆ. ಇವಿರಬ್ಬರೂ ಆಟಗಾರರು ಹಳಬರಾದರೂ ಹೊಸಬರನ್ನೂ ನಾಚಿಸುವಂತೆ ಆಡದ್ದು ವೀರೂ ಹೊಗಳಿಕೆಗೆ ಕಾರಣ.

ದೇಶದಲ್ಲಿ ಹಳೇ ನೋಟುಗಳು ಮಾತ್ರ ಚಲಾವಣೆ ನಿಂತಿರುವುದು. ಆದರೆ ಈ ಹಳೇ ಆಟಗಾರರಲ್ಲ. ಯುವಿ-ಮಹಿಯದ್ದು ಅತ್ಯುತ್ತಮ ಆಟ ಎಂದು ವೀರೂ ಕೊಂಡಾಡಿದ್ದಾರೆ. ಐದು ವರ್ಷಗಳ ಬಳಿಕ ಶತಕ ದಾಖಲಿಸಿದ ಯುವಿಗೆ ವಿಶೇಷ ಅಭಿನಂದನೆ ಸಲ್ಲಿಸಿದ ವೀರೂ, ಈತ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವ. ಇಂದು ಏಕಾಂಗಿಯಾಗಿ ಇಂಗ್ಲೆಂಡ್ ನ್ನು ಸೋಲಿಸಿದ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಶತಕ ಗಳಿಸಿದ ಮೇಲೆ ಮೊದಲಿನ ಹಾಗೆ ಓಡಾಡಲಾಗುತ್ತಿಲ್ಲವಂತೆ ಕನ್ನಡಿಗ ಕರುಣ್ ನಾಯರ್ ಗೆ!