Select Your Language

Notifications

webdunia
webdunia
webdunia
webdunia

ತ್ರಿಶತಕ ಗಳಿಸಿದ ಮೇಲೆ ಮೊದಲಿನ ಹಾಗೆ ಓಡಾಡಲಾಗುತ್ತಿಲ್ಲವಂತೆ ಕನ್ನಡಿಗ ಕರುಣ್ ನಾಯರ್ ಗೆ!

ತ್ರಿಶತಕ ಗಳಿಸಿದ ಮೇಲೆ ಮೊದಲಿನ ಹಾಗೆ ಓಡಾಡಲಾಗುತ್ತಿಲ್ಲವಂತೆ ಕನ್ನಡಿಗ ಕರುಣ್ ನಾಯರ್ ಗೆ!
Cuttack , ಶುಕ್ರವಾರ, 20 ಜನವರಿ 2017 (09:45 IST)
ಬೆಂಗಳೂರು: ಅದೇನು ಅದೃಷ್ಟವೋ, ದುರಾದೃಷ್ಟವೋ ಒಂದೂ ಅರಿಯೇ ಎನ್ನುತ್ತಿದ್ದಾರೆ ಕ್ರಿಕೆಟಿಗ ಕರುಣ್ ನಾಯರ್. ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೇಲೆ ಅವರಿಗೆ ಈಗ ಮೊದಲಿನ ಹಾಗೆ ಬೀದಿಯಲ್ಲಿ ಓಡಾಡಲಾಗುತ್ತಿಲ್ಲವಂತೆ.


ಕಾರಣ ಎಲ್ಲರಿಗೂ ಈಗ ಅವರನ್ನು ಚೆನ್ನಾಗಿ ಪರಿಚಯವಾಗಿದೆ. ಹೀಗಾಗಿ ಅವರು ಸಾರ್ವಜನಿಕವಾಗಿ ಓಡಾಡುತ್ತಿದ್ದರೆ, ಎಲ್ಲರೂ ಕರುಣ್ ಎಂದು ಮಾತನಾಡಿಸುತ್ತಾರೆ. ಮೊದಲಿಗಿಂತ ಜಾಸ್ತಿ ಜನ ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಕರುಣ್ ಹೇಳಿಕೊಂಡಿದ್ದಾರೆ.

ಸದ್ಯ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡದ ಪರ ಆಡಲಿರುವ ಕರುಣ್ ತಮ್ಮ ಜೀವನ ತ್ರಿಶತಕದ ನಂತರ ಬೇರೆ ಯಾವ ರೀತಿಯಲ್ಲೂ ಬದಲಾಗಿಲ್ಲ. ನಾನು ಮೊದಲು ಹೇಗಿದ್ದೆ ಈಗಲೂ ಹಾಗೇ ಇದ್ದೇನೆ ಎಂದಿದ್ದಾರೆ.

ಅಂದು ನಾನು ಬ್ಯಾಟಿಂಗ್ ಮಾಡಿದ್ದನ್ನು ನೋಡಿ ತಂಡದಲ್ಲಿದ್ದವರೆಲ್ಲಾ ಬೆನ್ನು ತಟ್ಟಿದ್ದರು. ಮುಂದೆಯೂ ಹೀಗೇ ಆಡು ಎಂದರು. ಅದು ನನಗೆ ಸ್ಪೂರ್ತಿ. ಮನೆಗೆ ಬಂದ ಮೇಲೂ ವಿಶೇಷವಾಗಿ ತ್ರಿಶತಕದ ಸಂಭ್ರಮ ಆಚರಿಸಲಿಲ್ಲ. ನಾನು ಹೇಗಿದ್ದೇನೋ, ಹಾಗೇ ಇರಲು ಬಯಸುತ್ತೇನೆ ಎಂದಿದ್ದಾರೆ ಕರುಣ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿಯ ಬಗ್ಗೆಯೂ ಯೋಚಿಸಿದ್ದ ಯುವರಾಜ್ ಸಿಂಗ್ !