Publish Date: Mon, 01 Apr 2019 (09:20 IST)
Updated Date: Mon, 01 Apr 2019 (09:21 IST)
ಮುಂಬೈ: ಅತ್ತ ಹೈದರಾಬಾದ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯದಲ್ಲಿ ಬ್ಯುಸಿಯಾಗಿದ್ದರೆ ಇತ್ತ ನಾಯಕ ವಿರಾಟ್ ಕೊಹ್ಲಿ ಹಾಟ್ ತಾರೆ ಸನ್ನಿ ಲಿಯೋನ್ ಜತೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡರೇ?!
ಹೀಗೊಂದು ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿತ್ತು. ಆದರೆ ಇದು ಅಸಲಿಗೆ ವಿರಾಟ್ ಕೊಹ್ಲಿ ಆಗಿರಲಿಲ್ಲ. ಸನ್ನಿ ಲಿಯೋನ್ ಜತೆಗೆ ನಗು ನಗುತ್ತಲೇ ನಡೆದಾಡುವ ವ್ಯಕ್ತಿ ಕೊಹ್ಲಿಯನ್ನೇ ಹೋಲುತ್ತಿದ್ದ.
ಇಂತಹದ್ದೊಂದು ವಿಡಿಯೋ ಹರಿಯಬಿಟ್ಟ ಅಭಿಮಾನಿಗಳೊಬ್ಬರು ಅಭಿಮಾನಿಗಳನ್ನು ಕೆಲವು ಕಾಲ ದಂಗುಬಡಿಸಿದ್ದರು. ಆದರೆ ಇಲ್ಲಿರುವುದು ಅಸಲಿಗೆ ಕೊಹ್ಲಿಯಲ್ಲ ಎನ್ನುವುದು ಸ್ಪಷ್ಟವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ