Select Your Language

Notifications

webdunia
webdunia
webdunia
webdunia

‘ಬಾಸ್’ ಜತೆಗೆ ವಿರಾಟ್ ಕೊಹ್ಲಿ ಪ್ರಾಕ್ಟೀಸ್! ಯಾರು ಆ ಬಾಸ್?!

ವಿರಾಟ್ ಕೊಹ್ಲಿ
ಕೊಲೊಂಬೋ: ಶ್ರೀಲಂಕಾ  ವಿರುದ್ಧ  ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಭಾರೀ ತಯಾರಿ ನಡೆಸಿದ್ದಾರೆ.

 
ಕೊಲೊಂಬೋ ಮೈದಾನದಲ್ಲಿ ಬುಧವಾರ ಕೊಹ್ಲಿ ತಮ್ಮ ‘ಬಾಸ್’ ಕಣ್ಗಾವಲಿನಲ್ಲಿ ತಾಲೀಮು ನಡೆಸಿದ್ದಾರೆ. ಅಷ್ಟಕ್ಕೂ ಈ ಬಾಸ್ ಕೋಚ್ ರವಿಶಾಸ್ತ್ರಿಯಾಗಿರಬಹುದು ಎಂದರೆ ನಿಮ್ಮ ಊಹೆ ತಪ್ಪು.

ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ‘ಬಾಸ್ ಜತೆಗೆ ತರಬೇತಿ ಪಡೆಯುತ್ತಿದ್ದೇನೆ’ ಎಂದು ಸಂದೇಶ ಹಾಕಿದ್ದಾರೆ. ಅದರ ಜತೆಗೆ ತಮ್ಮ ಬಾಸ್ ಫೋಟೋ ಹಾಕಿದ್ದಾರೆ. ಅವರು ಟೀಂ ಇಂಡಿಯಾದ ಫಿಟ್ನೆಸ್ ಟ್ರೈನರ್ ಶಂಕರ್ ಬಸು. ಬಸು ಕೆಲವು ತಿಂಗಳುಗಳ ಹಿಂದೆ ತಮ್ಮ ಹುದ್ದೆಗೆ  ರಾಜೀನಾಮೆ ಸಲ್ಲಿಸಿದ್ದರು.

ಇದೀಗ ಮತ್ತೆ ಬಿಸಿಸಿಐ ಅವರಿಗೆ ಮುಂದಿನ ವಿಶ್ವಕಪ್ ವರೆಗೆ ಎರಡು ವರ್ಷಗಳ ಗುತ್ತಿಗೆ ನೀಡಿದೆ. ಹೀಗಾಗಿ ಕೊಹ್ಲಿ ಮೆಚ್ಚಿನ ಫಿಟ್ನೆಸ್ ಟ್ರೈನರ್ ತಂಡವನ್ನು ಕೂಡಿಕೊಂಡಿದ್ದಾರೆ.

ಇದನ್ನೂ ಓದಿ.. ಧ್ರುವ ಸಾವಿಗೆ ಕಂಬನಿ ಮಿಡಿದ ಕಿಚ್ಚ ಸುದೀಪ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಬಿಟ್ಟು ಕೋಟ್ಯಾಧಿಪತಿ ಸೌರವ್ ಗಂಗೂಲಿ ಬಾಡಿಗೆ ಕಾರು ಹತ್ತಿದ್ದು ಯಾಕೆ?!