Publish Date: Wed, 02 Aug 2017 (10:15 IST)
Updated Date: Wed, 02 Aug 2017 (10:18 IST)
ಕೋಲ್ಕೊತ್ತಾ: ಪ್ರಿನ್ಸ್ ಆಫ್ ಕೋಲ್ಕೊತ್ತಾ ಎಂದೇ ಕರೆಯಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮಂಗಳವಾರ ತಮ್ಮ ಮೆಚ್ಚಿನ ಬಿಎಂಡಬ್ಲ್ಯು ಕಾರು ಬಿಟ್ಟು ಸಾಮಾನ್ಯ ಅಂಬಾಸಿಡರ್ ಕಾರಿನಲ್ಲಿ ಬಂದಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಅದೂ ಬಾಡಿಗೆ ಕಾರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಮುಂದೆ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಗೆ ಹಾಜರಾದ ಗಂಗೂಲಿಯನ್ನು ನೋಡಿ ಎಲ್ಲರಿಗೂ ಅಚ್ಚರಿ. ಆದರೆ ಅಸಲಿಗೆ ಅವರ ಬಿಎಂಡಬ್ಲ್ಯು ಕಾರು ಕೈಕೊಟ್ಟಿದ್ದೇ ಇದಕ್ಕೆಲ್ಲಾ ಕಾರಣ.
ದಾರಿ ಮಧ್ಯೆ ತಮ್ಮ ಐಷಾರಾಮಿ ಕಾರು ಕೈಕೊಟ್ಟು ನಿಂತಾಗ ನಿರ್ವಾಹವಿಲ್ಲದೇ ಗಂಗೂಲಿ ಬಾಡಿಗೆ ಕಾರು ಹತ್ತಿ ಸಭೆಗೆ ಆಗಮಿಸಿದ್ದರು. ಕೆಲವು ದಿನಗಳ ಹಿಂದೆ ಅವರು ರೈಲು ಏರಿ ಇರಿಸುಮುರಿಸು ಅನುಭವಿಸಿದ್ದನ್ನು ಇಲ್ಲಿ ನೆನಪಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ