Publish Date: Thu, 03 Aug 2017 (05:36 IST)
Updated Date: Thu, 03 Aug 2017 (05:42 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಭಾರೀ ತಯಾರಿ ನಡೆಸಿದ್ದಾರೆ.
ಕೊಲೊಂಬೋ ಮೈದಾನದಲ್ಲಿ ಬುಧವಾರ ಕೊಹ್ಲಿ ತಮ್ಮ ‘ಬಾಸ್’ ಕಣ್ಗಾವಲಿನಲ್ಲಿ ತಾಲೀಮು ನಡೆಸಿದ್ದಾರೆ. ಅಷ್ಟಕ್ಕೂ ಈ ಬಾಸ್ ಕೋಚ್ ರವಿಶಾಸ್ತ್ರಿಯಾಗಿರಬಹುದು ಎಂದರೆ ನಿಮ್ಮ ಊಹೆ ತಪ್ಪು.
ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ‘ಬಾಸ್ ಜತೆಗೆ ತರಬೇತಿ ಪಡೆಯುತ್ತಿದ್ದೇನೆ’ ಎಂದು ಸಂದೇಶ ಹಾಕಿದ್ದಾರೆ. ಅದರ ಜತೆಗೆ ತಮ್ಮ ಬಾಸ್ ಫೋಟೋ ಹಾಕಿದ್ದಾರೆ. ಅವರು ಟೀಂ ಇಂಡಿಯಾದ ಫಿಟ್ನೆಸ್ ಟ್ರೈನರ್ ಶಂಕರ್ ಬಸು. ಬಸು ಕೆಲವು ತಿಂಗಳುಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಇದೀಗ ಮತ್ತೆ ಬಿಸಿಸಿಐ ಅವರಿಗೆ ಮುಂದಿನ ವಿಶ್ವಕಪ್ ವರೆಗೆ ಎರಡು ವರ್ಷಗಳ ಗುತ್ತಿಗೆ ನೀಡಿದೆ. ಹೀಗಾಗಿ ಕೊಹ್ಲಿ ಮೆಚ್ಚಿನ ಫಿಟ್ನೆಸ್ ಟ್ರೈನರ್ ತಂಡವನ್ನು ಕೂಡಿಕೊಂಡಿದ್ದಾರೆ.