ಟೀಂ ಇಂಡಿಯಾ ಸೋತರೂ, ಬ್ಯಾಟ್ಸ್ ಮನ್ ಆಗಿ ಕೊಹ್ಲಿ ಸೋಲಲಿಲ್ಲ!

Webdunia
ಶನಿವಾರ, 27 ಜನವರಿ 2018 (08:22 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದಆಫ್ರಿಕಾ ನಡುವಿನ ಸರಣಿ ಶುರುವಾಗುವ ಮೊದಲು ವಿದೇಶಿ ನೆಲದಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ವಿರಾಟ್ ಕೊಹ್ಲಿ ಎದುರಿಗಿತ್ತು. ಅದನ್ನುವರು ತಂಡದ ನಾಯಕನಾಗಿ ಮಾಡಲು ಸಾಧ್ಯವಾಗದಿದ್ದರೂ ಆಟಗಾರನಾಗಿ ಮಾಡಿ ತೋರಿಸಿದ್ದಾರೆ.
 

ಆಫ್ರಿಕಾದಲ್ಲಿ ಗೆಲ್ಲುವ ಭಾರತದ ಕನಸು ಕನಸಾಗಿಯೇ ಉಳಿಯಿತು. ಆಟಗಾರರ ಆಯ್ಕೆ ವಿಚಾರದಲ್ಲಿ, ತಂಡದ ಸಂಯೋಜನೆ ವಿಚಾರದಲ್ಲಿ ಕೊಹ್ಲಿ ಎಡವಿದರು. ಅವರ ಆಯ್ಕೆಗಳ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು.

ಆದರೆ ಆಟಗಾರನಾಗಿ ಕೊಹ್ಲಿ ಎಡವಲಿಲ್ಲ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದರೆ ತೃತೀಯ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಉಪಯುಕ್ತ ಕೊಡುಗೆ ನೀಡಿದ್ದಾರೆ. ಇದರಿಂದಾಗಿ ಸೋಲಿನಲ್ಲೂ ಭಾರತಕ್ಕೆ ಸನ್ಮಾನ ಕೊಡಿಸಿದ್ದಾರೆ. ಬ್ಯಾಟ್ಸ್ ಮನ್ ಆಗಿ ವಿದೇಶಿ ಪಿಚ್ ನಲ್ಲಿ ಆಡಿ ತೋರಿಸಿದರೆ ಮಾತ್ರ ಅವರು ವಿಶ್ವ ಶ್ರೇಷ್ಟ ಎನ್ನಲು ಸಾಧ್ಯ ಎನ್ನುತ್ತಿದ್ದ ಮಾಜಿಗಳಿಗೆ ಅವರು ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಮುಂದಿನದೇನಿದ್ದರೂ ಇಂಗ್ಲೆಂಡ್ ಸವಾಲು. ಇಂಗ್ಲೆಂಡ್ ನೆಲದಲ್ಲಿ ಅಂದು ವಿಫಲರಾಗಿದ್ದ ಕೊಹ್ಲಿ, ಈ ಬಾರಿಯ ಪ್ರವಾಸದಲ್ಲಿ ರನ್ ಗಳಿಸಲು ಸಾಧ್ಯವಾದರೆ, ಅವರನ್ನು ಪರಿಪೂರ್ಣನಾಗಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

IND vs SA: ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಕಷ್ಟ ನಿವಾರಿಸಿದ ರನ್ ಮೆಷಿನ್ ಪ್ರಸಿದ್ಧ ಕೃಷ್ಣ

IND vs SA: ಕೊನೆಗೂ ಟಾಸ್ ಗೆದ್ದ ಟೀಂ ಇಂಡಿಯಾ, ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ video

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ಮುಂದಿನ ಸುದ್ದಿ
Show comments