Publish Date: Sun, 25 Dec 2016 (10:40 IST)
Updated Date: Sun, 25 Dec 2016 (10:42 IST)
ಲಂಡನ್: ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಂತರ ಲಾರ್ಡ್ಸ್ ವರ್ಷದ ಟಾಪ್ 20 ಆಟಗಾರರನ್ನು ಆರಿಸಿದೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಪಡೆದಿದ್ದಾರೆ.
ಲಾರ್ಡ್ಸ್ ಮೈದಾನದ ಅಧಿಕೃತ ಯೂ ಟ್ಯೂಬ್ ಚಾನೆಲ್ ನಲ್ಲಿ ಕ್ರಿಕೆಟಿಗರ ಪಟ್ಟಿಯನ್ನು ಅವರ ಸಾಧನೆ ಸಮೇತ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಈ ವರ್ಷಾ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ಕೊಹ್ಲಿಗೆ ಈ ಗೌರವ ಲಭಿಸಿದೆ.
ಕೊಹ್ಲಿಯಲ್ಲದೆ ಭಾರತೀಯ ಆಟಗಾರರ ಪೈಕಿ ರವಿಚಂದ್ರನ್ ಅಶ್ವಿನ್ ಗೆ ಮೂರನೇ ಸ್ಥಾನ,13 ನೇ ಸ್ಥಾನದಲ್ಲಿ ಅಜಿಂಕ್ಯ ರೆಹಾನೆ, ಚೇತೇಶ್ವರ ಪೂಜಾರಗೆ 18 ನೇ ಸ್ಥಾನ ಲಭಿಸಿದೆ. ಇಂಗ್ಲೆಂಡ್ ನ ವಿಕೆಟ್ ಕೀಪರ್ ಜಾನಿ ಬೇರ್ ಸ್ಟೋ ದ್ವಿತೀಯ ಸ್ಥಾನಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ