Publish Date: Sun, 25 Dec 2016 (10:22 IST)
Updated Date: Sun, 25 Dec 2016 (10:23 IST)
ರಾಂಚಿ: ಈಗೆಲ್ಲಾ ಏನಿದ್ದರೂ ಖ್ಯಾತ ಕ್ರಿಕೆಟಿಗರು ತಾವು ರಾಯಭಾರಿಯಾಗಿರುವ ಉತ್ಪನ್ನಗಳ ಪ್ರಾಯೋಜಕರು ಹೇಳಿದಂತೆ ಕೇಳುತ್ತಾರೆ. ಹಾಗೇ ಮುಂದಿನ ಐಪಿಎಲ್ ನಲ್ಲಿ ನೀವು ಪುಣೆ ರೈಸರ್ಸ್ ತಂಡದ ಎಂಎಸ್ ಧೋನಿ ಕಲರ್ ಕಲರ್ ಬ್ಯಾಟ್ ಹಿಡಿದು ಆಡುವುದನ್ನು ನೋಡಲಿದ್ದೀರಿ.
ಧೋನಿ ಸ್ಪರ್ಟಾನ್ ಸ್ಪೋರ್ಟ್ ಉತ್ಪನ್ನಕ್ಕೆ ಪ್ರಚಾರ ರಾಯಭಾರಿ. ಈ ಸಂಸ್ಥೆ ಕ್ರಿಕೆಟ್ ಪರಿಕರಗಳನ್ನು ತಯಾರಿಸುತ್ತದೆ. ಅದೀಗ ಧೋನಿಗೆ ಮುಂದಿನ ಐಪಿಎಲ್ ನಲ್ಲಿ ಕಲರ್ ಫುಲ್ ಬ್ಯಾಟ್ ಬಳಸಲು ಸಲಹೆ ಮಾಡಿದೆ.
ಕ್ರಿಕೆಟ್ ನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಕಿರು ಮಾದರಿ ಒಂದು ವೇದಿಕೆ. ಧೋನಿ ಕಲರ್ ಫುಲ್ ಬ್ಯಾಟ್ ಪರಿಚಯಿಸಲು ಸೂಕ್ತ ವ್ಯಕ್ತಿ. ಅವರನ್ನು ಎಲ್ಲರೂ ಅನುಕರಿಸುತ್ತಾರೆ. ಹೀಗಾಗಿ ಅವರನ್ನೇ ಈ ಪ್ರಯೋಗಕ್ಕೆ ಆರಿಸಿಕೊಂಡಿದ್ದೇವೆ ಎಂದು ಸ್ಪರ್ಟಾನ್ ಸಂಸ್ಥೆ ಹೇಳಿದೆ. ಸದ್ಯಕ್ಕೆ ಐಪಿಎಲ್ ನಲ್ಲಿ ಮಾತ್ರವೇ ಕಲರ್ ಫುಲ್ ಬ್ಯಾಟ್ ಬಳಸಲು ಅವಕಾಶವಿರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ