Publish Date: Thu, 29 Jul 2021 (10:34 IST)
Updated Date: Thu, 29 Jul 2021 (10:36 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲವ್ಲೀ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್ ಪಿಯು) ಬಗ್ಗೆ ನೀಡಿದ ಜಾಹೀರಾತೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಕೊಹ್ಲಿ ತಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಎಲ್ ಪಿಯು ಒಲಿಂಪಿಕ್ಸ್ ಗೆ 11 ಜನ ಆಟಗಾರರನ್ನು ತಯಾರಿಸಿ ಕಳುಹಿಸಿರುವುದಾಗಿ ಹೊಗಳಿ ಬರೆದಿದ್ದರು. ಇದನ್ನು ಪೋಸ್ಟ್ ಮಾಡುವಾಗ ಪ್ರಮೋಷನಲ್ ಆಕ್ಟಿವಿಟಿ ಎಂದು ಟ್ಯಾಗ್ ಮಾಡಿಲ್ಲ. ಇದರಿಂದಾಗಿ ಅವರೀಗ ಸಂಕಷ್ಟಕ್ಕೀಡಾಗಿದ್ದಾರೆ.
ಇದು ನಿಯಮಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕೊಹ್ಲಿಗೆ ನೋಟಿಸ್ ನೀಡುವುದಾಗಿ ಭಾರತೀಯ ಜಾಹೀರಾತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಹೇಳಿದೆ. ಅತ್ತ ನೆಟ್ಟಿಗರೂ ಈ ಪೋಸ್ಟ ಗೆ ಕಾಮೆಂಟ್ ಮಾಡಿ ಇದನ್ನು ಪ್ರಮೋಷನಲ್ ಆಕ್ಟಿವಿಟಿ ಎಂದು ಬರೆಯಬೇಕಿತ್ತು ಎಂದು ಆಕ್ಷೇಪಿಸಿದ್ದರು.