Select Your Language

Notifications

webdunia
webdunia
webdunia
webdunia

ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!

ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!
ಗಾಲೆ , ಸೋಮವಾರ, 31 ಜುಲೈ 2017 (09:34 IST)
ಗಾಲೆ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಒಬ್ಬರ ಕೆನ್ನೆಗೆ ಮುತ್ತಿಕ್ಕಿದ್ದನ್ನು ನೋಡಿ ಶ್ರೀಲಂಕಾ ವೀಕ್ಷಕರು ಬಾಯ್ತುಂಬಾ ನಕ್ಕು ಸೋಲಿನ ನೋವು ಮರೆತರು. ಅಷ್ಟಕ್ಕೂ ಕೊಹ್ಲಿ ಹೀಗೆ ಖುಲ್ಲಾಂ ಖುಲ್ಲಾಂ ಮುತ್ತಿಕ್ಕಿದ್ದು ಯಾರಿಗೆ ಗೊತ್ತಾ?


81 ವರ್ಷದ ಶ್ರೀಲಂಕಾ ಕ್ರಿಕೆಟ್ ಅಧಿಕೃತ ಅಭಿಮಾನಿ ಪರ್ಸಿ ಅಂಕಲ್ ಗೆ. ಭಾರತದಲ್ಲಿ ತೆಂಡುಲ್ಕರ್ ಅಭಿಮಾನಿ ಸುಧೀರ್ ಕುಮಾರ್, ಪಾಕಿಸ್ತಾನದ ಅಫೀಶಿಯಲ್ ಅಭಿಮಾನಿ ಕ್ರಿಕೆಟ್ ಚಾಚಾ ಇರುವಂತೆ ಶ್ರೀಲಂಕಾ ಕ್ರಿಕೆಟ್ ಅಭಿಮಾನಿ ಪರ್ಸಿ. ಅವರಿಗೀಗ 81 ವರ್ಷ. ಶ್ರೀಲಂಕಾ ಕ್ರಿಕೆಟ್ ಆಡುವಲ್ಲೆಲ್ಲಾ ಹಿಂಬಾಲಿಸುವ ಪರ್ಸಿ ಅಂಕಲ್ ಗೆ ಕೊಹ್ಲಿ ಮರೆಯಲಾರದ ಉಡುಗೊರೆ ಕೊಟ್ಟಿದ್ದಾರೆ.

ಶ್ರೀಲಂಕಾ ಪ್ರಥಮ ಟೆಸ್ಟ್ ಸೋಲುವ ಹಂತದಲ್ಲಿದ್ದಾಗ ಪರ್ಸಿ ಅಂಕಲ್ ಬಳಿಗೆ ಬಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ‘ಹ್ಯಾಪಿ ಬರ್ತ್ ಡೇ ಪರ್ಸಿ ಅಂಕಲ್’ ಎಂದಿದ್ದಾರೆ. ಅಸಲಿಗೆ ಭಾನುವಾರ ಅವರ ಜನುಮ ದಿನವಾಗಿತ್ತು. ಅಷ್ಟೇ ಅಲ್ಲ, ಕೊಹ್ಲಿ ಪರ್ಸಿ ಅಂಕಲ್ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಪರ್ಸಿ ಅಂಕಲ್ ಗೆ ಅಚ್ಚರಿಯೋ ಅಚ್ಚರಿ. ಅಷ್ಟೇ ಅಲ್ಲ, ನೆರೆದಿದ್ದ ಪ್ರೇಕ್ಷಕರು ಕೊಹ್ಲಿ ಮುತ್ತಿಕ್ಕಿದ್ದನ್ನು ನೋಡಿ ನಕ್ಕುಬಿಟ್ಟರು.

ಪ್ರತಿಯಾಗಿ ಪರ್ಸಿ ಅಂಕಲ್ ಕೂಡಾ ಕೊಹ್ಲಿ ಕೆನ್ನೆಗೆ ಮುತ್ತಿಕ್ಕಿ ತಮ್ಮ ಧನ್ಯವಾದ ಸಲ್ಲಿಸಿದರು. ಹಿಂದೆಯೂ ಲಂಕಾದ ಈ ಹಿರಿಯ  ಅಭಿಮಾನಿ ಭಾರತದ ಕ್ರಿಕೆಟಿಗರೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ