Select Your Language

Notifications

webdunia
webdunia
webdunia
webdunia

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ
ಮುಂಬೈ , ಸೋಮವಾರ, 31 ಜುಲೈ 2017 (08:58 IST)
ಮುಂಬೈ: ಕೋಚ್ ಆಯ್ಕೆ ವಿಚಾರದಲ್ಲಿ ರವಿ ಶಾಸ್ತ್ರಿಯನ್ನು ಬೆಂಬಲಿಸಿದ ಮೇಲೆ ಯಾಕೋ ಆಗಾಗ ಅವಕಾಶ ಸಿಕ್ಕಾಗಲೆಲ್ಲಾ ಮಾಜಿ ನಾಯಕ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ಕೊಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.


ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದರೂ ಗಂಗೂಲಿ ಯಾಕೋ ಕೊಹ್ಲಿಗೆ ಶಹಬ್ಬಾಶ್ ಗಿರಿ ಕೊಡಲು ತಯಾರಿಲ್ಲ. ನಾಯಕರಾಗಿ ಕೊಹ್ಲಿ ಇನ್ನೂ ಅಗ್ನಿ ಪರೀಕ್ಷೆ ಎದುರಿಸಿಲ್ಲ. ಅವರು ಇನ್ನೂ ಕಠಿಣ ಸವಾಲು ಎದುರಿಸಲು ಬಾಕಿಯಿದೆ ಎಂದಿದ್ದಾರೆ.

‘ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲೂ ಸಮತೋಲನ ಹೊಂದಿದೆ. ಈಗಿನ ತಂಡ ಅತ್ಯುತ್ತಮವಾಗಿದೆ. ಹಾಗಿದ್ದರೂ, ಕೊಹ್ಲಿ ನಾಯಕರಾಗಿ ಇನ್ನೂ ಕಠಿಣ ಸವಾಲನ್ನು ಎದುರಿಸಿಲ್ಲ. ಈವರೆಗೆ ಅವರ ಹಾದಿ ಸುಗಮವಾಗಿಯೇ ಇತ್ತು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಕೊಹ್ಲಿ, ಜನ ನನ್ನ ತಪ್ಪುಗಳನ್ನೇ ಹೆಚ್ಚು ಲೆಕ್ಕ ಹಾಕುತ್ತಿರುತ್ತಾರೆ. ಆದರೆ ನಾನು ಅದನ್ನೆಲ್ಲಾ ಲೆಕ್ಕ ಹಾಕುತ್ತಾ ಕೂರುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಹಾಟ್ ಫೋಟೋ ಔಟ್