Publish Date: Sat, 28 Jan 2017 (12:10 IST)
Updated Date: Sat, 28 Jan 2017 (12:13 IST)
ನಾಗ್ಪುರ: ನಾಳೆ ನಾಗ್ಪುರದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡನೇ ಟಿ-ಟ್ವೆಂಟಿ ಪಂದ್ಯ ನಡೆಯಲಿದೆ. ನಾಳಿನ ಪಂದ್ಯದಲ್ಲಿ ಆಡುವ ಬಳಗದ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಕ್ಲೂ ಕೊಟ್ಟಿದ್ದಾರೆ. ಏನದು?
ಕಳೆದ ಪಂದ್ಯ ಸೋತು ಒತ್ತಡದಲ್ಲಿರುವ ಟೀಂ ಇಂಡಿಯಾ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಆಡಿರಲಿಲ್ಲ. ನಾಳಿನ ಪಂದ್ಯದಲ್ಲಿ ಅವರನ್ನು ಆಡಿಸುವ ಬಗ್ಗೆ ಕೊಹ್ಲಿ ಸೂಚನೆ ನೀಡಿದ್ದಾರೆ.
“ಆತ ಉತ್ತಮವಾಗಿ ಆಡುತ್ತಾರೆ. ಐಪಿಎಲ್, ಟಿ-ಟ್ವೆಂಟಿ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೂ ಕಳೆದ ವರ್ಷ ಅವರಿಗೆ ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರು ನಮ್ಮ ಅವಶ್ಯಕತೆಗೆ ತಕ್ಕ ಹಾಗೆ ಲಭ್ಯರಿರುತ್ತಾರೆ” ಎಂದಿದ್ದಾರೆ ಕೊಹ್ಲಿ. ಆ ಮೂಲಕ ಕಳೆದ ಪಂದ್ಯದಲ್ಲಿ ಪರಿಣಾಮ ಬೀರದ ಜಮ್ಮು ಕಾಶ್ಮೀರ ಸ್ಪಿನ್ನರ್ ಪರ್ವೇಜ್ ರಸೂಲ್ ಜಾಗದಲ್ಲಿ ಮಿಶ್ರಾರನ್ನು ಕಣಕ್ಕಿಳಿಸುವ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ