Select Your Language

Notifications

webdunia
webdunia
webdunia
webdunia

ಸೂಪರ್ ಸಂಡೇಗೆ ತಯಾರಾದ ಟೆನಿಸ್ ಲೋಕ! ನಾಳೆ ಭಾರತಕ್ಕೂ ಸ್ಪೆಷಲ್ ಡೇ!

ಸೂಪರ್ ಸಂಡೇಗೆ ತಯಾರಾದ ಟೆನಿಸ್ ಲೋಕ! ನಾಳೆ ಭಾರತಕ್ಕೂ ಸ್ಪೆಷಲ್ ಡೇ!

Krishnaveni K

Melbourne , ಶನಿವಾರ, 28 ಜನವರಿ 2017 (10:43 IST)
ಮೆಲ್ಬೋರ್ನ್:  ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ಇಷ್ಟೊಂದು ಕಲರ್ ಫುಲ್ ಆಗಿ ಯಾವತ್ತೂ ಇರಲಿಲ್ಲವೇನೋ. ಅಷ್ಟು ಅದ್ಭುತ ರಸಗವಳ ನೀಡುವ ಪಂದ್ಯಗಳು ನಿಮಗಾಗಿ ಕಾದಿವೆ. ಮೂರೂ ಮಾದರಿಯಲ್ಲಿ ಘಟಾನುಘಟಿಗಳ ಹೋರಾಟವಿದೆ.

 
ಮೊದಲಿಗೆ ಪುರುಷರ ಸಿಂಗಲ್ಸ್ ಪಂದ್ಯ ನೋಡೋಣ. 14 ಬಾರಿಯ ಗ್ರಾಂಡ್ ಸ್ಲಾಂ ಒಡೆಯ ರಾಫೆಲ್ ನಡಾಲ್, ಇದು ಒಂಭತ್ತನೇ ಬಾರಿ ದೀರ್ಘಕಾಲದ ಎದುರಾಳಿ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ.  ಒಟ್ಟು ಒಂಭತ್ತು ಗ್ರಾಂಡ್ ಸ್ಲಾಂ ಫೈನಲ್ ನಲ್ಲಿ ಇವರಿಬ್ಬರು ಎದುರಾಗಿದ್ದು, 6 ಬಾರಿ ನಡಾಲ್ ಗೆದ್ದರೆ, ಎರಡು ಬಾರಿ ಫೆಡರರ್ ಗೆದ್ದಿದ್ದಾರೆ. ಈ ಬಾರಿ ನಾಲ್ಕು ವರ್ಷಗಳ ನಂತರ ಈ ಮದಗಜಗಳು ಕಣದಲ್ಲಿ ಸೆಣಸಾಡಲಿವೆ.

ಎರಡನೆಯದ್ದು ಮಹಿಳಾ ಸಿಂಗಲ್ಸ್ ಪಂದ್ಯ.  ಇದೊಂಥರಾ ಅಕ್ಕ-ತಂಗಿಯರ ಜಗಳ.  ಇಲ್ಲಿ ಅಮೆರಿಕಾದ ಖ್ಯಾತ ಟೆನಿಸ್ ಸಹೋದರಿಯರಾದ ವೀನಸ್ ಮತ್ತು ಸೆರೆನಾ ವಿಲಿಯಮ್ಸ್ ಪರಸ್ಪರ ಕಾದಾಡಲಿದ್ದಾರೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ತಂಗಿ ಸೆರೆನಾ ಸಿಂಗಲ್ಸ್ ವಿಭಾಗದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈಗಾಗಲೇ 22 ಗ್ರಾಂಡ್ ಸ್ಲಾಂ ಗೆದ್ದು ಸ್ಟೆಫಿ ಗ್ರಾಫ್ ದಾಖಲೆ ಸರಿಗಟ್ಟಿರುವ ಸೆರೆನಾ ಈ ಪಂದ್ಯ ಗೆದ್ದರೆ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಹಾಗಾಗಿ ಇದೊಂದು ಅಪರೂಪದ ಪಂದ್ಯವಾಗಲಿದೆ.

ಇನ್ನು, ಮಿಕ್ಸೆಡ್ ಡಬಲ್ಸ್ ವಿಭಾಗ. ಇದು ಭಾರತದ ಪಾಲಿಗೆ ವಿಶೇಷ ಪಂದ್ಯ. ಇಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೊಡಿಗ್ ಜೋಡಿ ಅಬಿಗೇಲ್ ಸ್ಪಿಯರ್ಸ್-ಜುವಾನ್ ಸೆಬಾಸ್ಟಿಯನ್ ಜೋಡಿಯನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಸಾನಿಯಾಗೆ ಇದು 7 ನೇ ಗ್ರಾಂಡ್ ಸ್ಲಾಂ ಕಿರೀಟವಾಗಲಿದೆ. ಹಾಗಾಗಿಯೇ ನಾಳೆ ಟೆನಿಸ್ ಲೋಕಕ್ಕೆ ವಿಶೇಷ ಭಾನುವಾರ. ಕಾದು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಿಗಿಂತ ದೇಶವೇ ಮುಖ್ಯವೆಂದಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ!