Webdunia - Bharat's app for daily news and videos

Install App

ಸೋತ ಮೇಲೆ ಪತ್ರಕರ್ತರ ಬೆಂಕಿಯಂತಹ ಪ್ರಶ್ನೆಗೆ ಉತ್ತರಿಸಲಾಗದೆ ಸಿಟ್ಟಿಗೆದ್ದ ಕೊಹ್ಲಿ!

Webdunia
ಗುರುವಾರ, 18 ಜನವರಿ 2018 (08:49 IST)
ಸೆಂಚೂರಿಯನ್: ಸೋತವರ ಮೇಲೆ ಆಳಿಗೊಂದು ಕಲ್ಲಿನಂತೆ ಎಸೆಯುತ್ತಾರೆ ಎನ್ನುವುದು ನಿಜವೇ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಚಾರದಲ್ಲೂ ಹಾಗೆಯೇ ಆಗಿದೆ. ಕೊಹ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ಘಟನೆ ನಡೆದಿದೆ.
 

ಸರಣಿ ಸೋತ ಬಳಿಕ ಸುದ್ದಿಗೋಷ್ಠಿಗೆ ಬಂದ ಕೊಹ್ಲಿ ಪತ್ರಕರ್ತರು ಸಾಕಷ್ಟು ತೀಕ್ಷ್ಣ ಪ್ರಶ್ನೆಗಳನ್ನೇ ಕೇಳುತ್ತಿದ್ದರು. ಆರಂಭದಲ್ಲಿ ಶಾಂತವಾಗಿಯೇ ಉತ್ತರಿಸುತ್ತಿದ್ದ ಕೊಹ್ಲಿ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡರು.

ನೀವು ಅತ್ಯುತ್ತಮ 11 ರ ಬಳಗವನ್ನು ಆರಿಸಿದ್ದೀರಾ ಎಂದು ಪತ್ರಕರ್ತರು ಕೇಳಿದಾಗ ಕೆಂಡಾಮಂಡಲರಾದ ಕೊಹ್ಲಿ ‘ಅತ್ಯುತ್ತಮ 11 ಕ್ರಿಕೆಟಿಗರು ಎಂದರೆ ಯಾರು? ಒಂದು ವೇಳೆ ನಾವು ಗೆದ್ದಿದ್ದರೆ ಇದುವೇ ಅತ್ಯುತ್ತಮ ತಂಡವಾಗಿರುತ್ತಿತ್ತು?  ನೀವು ಹೇಳುವ ಪ್ರಕಾರ ನಾನು ಅತ್ಯುತ್ತಮ 11 ಆಟಗಾರರನ್ನು ಆರಿಸಬೇಕಿತ್ತು. ಹಾಗಿದ್ದರೆ ನೀವೇ ಹೇಳಿ ಯಾರು 11 ಅತ್ಯುತ್ತಮ ಕ್ರಿಕೆಟಿಗರು?’ ಎಂದು ಕೊಹ್ಲಿ ಆಕ್ರೋಶದಿಂದಲೇ ಪ್ರಶ್ನಿಸಿದರು.

‘ಸೋಲು ಎಲ್ಲರಿಗೂ ನಿರಾಸೆ ತರುತ್ತದೆ. ಹಾಗಂತ ಅಷ್ಟಕ್ಕೇ ತಂಡವನ್ನು ದೂಷಿಸುವುದು ಸರಿಯಲ್ಲ. ಯಾರೇ ಆಗಲಿ ತಂಡಕ್ಕೆ ಆಯ್ಕೆಯಾದ ಮೇಲೆ ತಮ್ಮ ಬೆಸ್ಟ್ ಪರ್ಫಾರ್ಮೆನ್ಸ್ ಕೊಡಲೇಬೇಕು. ನಾವು ಒಂದು ಅತ್ಯುತ್ತಮ ತಂಡದ ಎದುರು ಸೋತಿದ್ದೇವೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಮುಂದಿನ ಸುದ್ದಿ
Show comments