Select Your Language

Notifications

webdunia
webdunia
webdunia
webdunia

ಫಿಟ್ ನೆಸ್ ಗಾಗಿ ಬಟರ್ ಚಿಕನ್, ಫಾಸ್ಟ್ ಫುಡ್ ಬಿಟ್ಟ ವಿರಾಟ್ ಕೊಹ್ಲಿ!

ಫಿಟ್ ನೆಸ್ ಗಾಗಿ ಬಟರ್ ಚಿಕನ್,  ಫಾಸ್ಟ್ ಫುಡ್ ಬಿಟ್ಟ ವಿರಾಟ್ ಕೊಹ್ಲಿ!
NewDelhi , ಗುರುವಾರ, 19 ಜನವರಿ 2017 (09:29 IST)
ಮುಂಬೈ: ಶ್ರೇಷ್ಠ ಕ್ರಿಕೆಟಿಗರಾಗಲು ಆಟಗಾರರು ಏನೇನೋ ತ್ಯಾಗ ಮಾಡುತ್ತಾರೆ. ಆದರೆ ಟೀಂ ಇಂಡಿಯಾ ನಾಯಕ ತಮ್ಮ ಫಿಟ್ ನೆಸ್ ಉಳಿಸಿಕೊಳ್ಳಲು ಇಷ್ಟದ ಆಹಾರ ಗಳನ್ನೇ ಮರೆತಿದ್ದಾರಂತೆ.


ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಕೊಹ್ಲಿಯ ಇಷ್ಟದ ಆಹಾರಗಳನ್ನು ನೆನಪಿಸಿದ್ದಾರೆ.  ಅವರಿಗೆ ಬಟರ್ ಚಿಕನ್, ರೋಲ್ಸ್ ಮತ್ತು ಫಾಸ್ಟ್ ಫುಡ್ ಎಂದರೆ ಬಹಳ ಇಷ್ಟವಂತೆ. ಆದರೆ ಇಂದು ಅವರ ಆಹಾರದ ಮೆನುವಿನಲ್ಲಿ ಈ ತಿಂಡಿಗಳೆಲ್ಲಾ ಹುಡುಕಿದರೂ ಸಿಗದು ಎಂದು ಕೋಚ್ ಹೇಳಿದ್ದಾರೆ.

ಫಿಟ್ ಆಗಿರಲು ಕೊಹ್ಲಿ ತಮ್ಮ ಇಷ್ಟದ ಆಹಾರವನ್ನೇ ಮರೆತಿದ್ದಾರಂತೆ. ತಂಡಕ್ಕಾಗಿ ಉತ್ತಮವಾಗಿ ಆಡಬೇಕು ಎನ್ನುವ ಹಂಬಲದಲ್ಲಿ ಅವರು ಹಲವು ತ್ಯಾಗಗಳನ್ನು ಮಾಡಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ, ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಮಾಡುವುದೆಂದರೆ ಸುಲಭವಲ್ಲ ಎಂದು ರಾಜ್ ಕುಮಾರ್ ಶಿಷ್ಯನನ್ನು ಹೊಗಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಲ್ಲಿಕಟ್ಟು ಪ್ರತಿಭಟನಾಕಾರರಿಗೆ ರವಿಚಂದ್ರನ್ ಅಶ್ವಿನ್ ವಿಶೇಷ ಮನವಿ