Publish Date: Sun, 20 Jun 2021 (09:25 IST)
Updated Date: Sun, 20 Jun 2021 (09:27 IST)
ಸೌಥಾಂಪ್ಟನ್: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಕೊಕೊಕೋಲಾ ಪಾನೀಯ ಕುಡಿಯುವ ಬದಲು ನೀರು ಕುಡಿಯಿರಿ ಎಂದು ಸಂದೇಶ ನೀಡಿದ್ದು ಭಾರೀ ವೈರಲ್ ಆಗಿತ್ತು. ಆದರೆ ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದಲೂ ಇದನ್ನೇ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿದ್ದ ಸಾಫ್ಟ್ ಡ್ರಿಂಕ್ಸ್ ಕೊಕೊಕೋಲಾ ಬಾಟಲಿಗಳನ್ನು ಬದಿಗೆ ಸರಿಸಿ ನೀರು ಕುಡಿಯುವಂತೆ ರೊನಾಲ್ಡೋ ಸನ್ನೆ ಮಾಡಿದ್ದರು. ಇದರಿಂದಾಗಿ ಕೋಲಾ ಕಂಪನಿ ಷೇರು ಭಾರೀ ಕುಸಿದಿತ್ತು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಆರೋಗ್ಯಕರವಲ್ಲದ ಜಾಹೀರಾತಿನಲ್ಲಿ ನಟಿಸಲ್ಲ. ಹಾಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಕ್ಕೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಎದುರಿದ್ದ ಕೋಲಾ ಬಾಟಲಿಯನ್ನು ಪಕ್ಕಕ್ಕೆ ಸರಿಸಿ ರೊನಾಲ್ಡೋ ಹಾದಿಯನ್ನು ಅನುಸರಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ರೊನಾಲ್ಡೋರಂತೆ ಕೊಹ್ಲಿ ಮಾಡಿಲ್ಲ. ಇದನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.