Publish Date: Wed, 17 Mar 2021 (10:21 IST)
Updated Date: Wed, 17 Mar 2021 (10:23 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ನಿನ್ನೆಯ ಪಂದ್ಯದ ಬಳಿಕ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಪ್ರಶ್ನೆ ಮಾಡಿದಾಗ ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಚಾಂಪಿಯನ್ ಬ್ಯಾಟ್ಸ್ ಮನ್ ಎಂದು ಹೊಗಳಿದ್ದಾರೆ.
ಕೆಎಲ್ ಚಾಂಪಿಯನ್ ಬ್ಯಾಟ್ಸ್ ಮನ್. ಕಳೆದ 2-3 ವರ್ಷಗಳಲ್ಲಿ ಅವರ ದಾಖಲೆ ನೋಡಿದರೆ ಟಿ20 ಕ್ರಿಕೆಟ್ ನಲ್ಲಿ ಅವರಂತೆ ಸಾಧನೆ ಮಾಡಿದವರು ಯಾರೂ ಇಲ್ಲ. ರೋಹಿತ್ ಜೊತೆಗೆ ಅವರು ನಮ್ಮ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಆಗಿ ಮುಂದುವರಿಯಲಿದ್ದಾರೆ. ಇದೆಲ್ಲಾ ಆರೇಳು ಎಸೆತಗಳ ವಿಚಾರವಷ್ಟೇ. ಸ್ವಲ್ಪ ಎಸೆತ ಎದುರಿಸಿದರೆ ಆಟಕ್ಕೆ ಕುದುರಿಕೊಳ್ಳುತ್ತಾರೆ. ಅವರ ಫಾರ್ಮ್ ಚಿಂತೆಯ ವಿಷಯವಲ್ಲ ಎಂದು ಕೊಹ್ಲಿ ಬೆಂಬಲಿಸಿ ಮಾತನಾಡಿದ್ದಾರೆ.