Publish Date: Wed, 13 Dec 2017 (08:23 IST)
Updated Date: Wed, 13 Dec 2017 (08:25 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾರಿಗೂ ಗೊತ್ತಾಗದಂತೆ ಇಟೆಲಿಯಲ್ಲಿ ಸೀಕ್ರೆಟ್ ಆಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡಿದ್ದಾರೆ.
ಭಾರತೀಯ ಮಾಧ್ಯಮಗಳನ್ನು, ಇಲ್ಲಿನ ವೃತ್ತಿ ಸ್ನೇಹಿತರನ್ನು ಇಬ್ಬರೂ ಮದುವೆಗೆ ಆಹ್ವಾನಿಸಿರಲಿಲ್ಲ. ಹಾಗಿದ್ದರೂ ಮದುವೆ ಎಂದ ಮೇಲೆ ಎಂಜಾಯ್ ಮೆಂಟ್ ಇರಲೇಬೇಕಲ್ವೇ?
ಹಾಗಾಗಿ ಮದುವೆಯಾದ ಬಳಿಕ ಅದರ ಸಂಭ್ರಮಾಚರಣೆ ಮಾಡಲು ವಿರಾಟ್-ಅನುಷ್ಕಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಬಳಿಕ ಸಂಜೆ ತಮ್ಮ ಕುಟುಂಬದವರು, ಕೆಲವೇ ಕೆಲವು ಆಪ್ತ ಸ್ನೇಹಿತರೊಂದಿಗೆ ವಿರಾಟ್-ಅನುಷ್ಕಾ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಮನರಂಜಿಸಿದರು ಎನ್ನಲಾಗಿದೆ. ಈ ಮೂಲಕ ಮದುವೆಯಾದ ಖುಷಿಯನ್ನು ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಂಭ್ರಮಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ