Select Your Language

Notifications

webdunia
webdunia
webdunia
webdunia

ಭಾರತದ ಮುಖ್ಯ ಕೋಚ್‌ ಹುದ್ದೆಗೆ ಅಖಾಡಕ್ಕಿಳಿದ ವೆಂಕಟೇಶ್ ಪ್ರಸಾದ್

ಭಾರತದ ಮುಖ್ಯ ಕೋಚ್‌ ಹುದ್ದೆಗೆ ಅಖಾಡಕ್ಕಿಳಿದ ವೆಂಕಟೇಶ್ ಪ್ರಸಾದ್
ನವದೆಹಲಿ: , ಬುಧವಾರ, 8 ಜೂನ್ 2016 (20:13 IST)
ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ರವಿ ಶಾಸ್ತ್ರಿ ಮುಂತಾದವರ ಜತೆ ಅಖಾಡಕ್ಕೆ ಇಳಿದಿದ್ದಾರೆ. ತಾವು ಇಂದು ಬೆಳಿಗ್ಗೆ ಅರ್ಜಿ ಸಲ್ಲಿಸಿದ್ದಾಗಿ ಪ್ರಸಾದ್ ಬಹಿರಂಗ ಮಾಡಿದರು. ಪ್ರಸಕ್ತ ಬಿಸಿಸಿಐ ಕಿರಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಪ್ರಸಾದ್, ಕೋಚಿಂಗ್ ಪಾತ್ರಕ್ಕೆ ಹಿಂತಿರುಗಲು ತೀವ್ರ ಆಸಕ್ತರಾಗಿದ್ದಾರೆ. ಅವರು ಹಿಂದೆ ಕೂಡ ಭಾರತದ ಬೌಲಿಂಗ್ ಕೋಚ್ ಆಗಿದ್ದರು. 
 
 ವಾಸ್ತವವಾಗಿ ಭಾರತ 2007ರ ಐಸಿಸಿ ವಿಶ್ವ ಟಿ 20ಯಲ್ಲಿ ಗೆಲುವು ಗಳಿಸಿದಾಗ ಪ್ರಸಾದ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಹೆಡ್ ಕೋಚ್ ಹುದ್ದೆಗೆ ಪ್ರಸಾದ್ ರವಿಶಾಸ್ತ್ರಿ, ಸಂದೀಪ್ ಪಾಟೀಲ್ ಮುಂತಾದವರಿಂದ ಕಠಿಣ ಸ್ಪರ್ಧೆ ಎದುರಿಸಿದ್ದಾರೆ.  ಪ್ರಸಾದ್ ಅವರಿಗೆ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗದಿದ್ದರೆ ಬೌಲಿಂಗ್ ಕೋಚ್ ಆಗುವುದಕ್ಕೆ ಕೂಡ ಮುಕ್ತ ಮನಸ್ಸು ಹೊಂದಿದ್ದಾರೆಂದು ತಿಳಿದುಬಂದಿದೆ. 
 
 ಪ್ರಸಾದ್ ಅವರು 2007 ಮತ್ತು 2009ರ ನಡುವೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದು, ಈಗ  ಅಮಾನತಾದ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡದ ಜತೆ ಕೂಡ ಕೆಲಸ ನಿರ್ವಹಿಸಿದ್ದರು. 
2008ರಲ್ಲಿ ಗ್ಯಾರಿ ಕಿರ್ಸ್ಟನ್ ಕೋಚ್ ಆದ ಮೇಲೆ ಎರಿಕ್ ಸಿಮ್ಮನ್ಸ್ ಅವರಿಗೆ ಬದಲಿಯಾಗಿ ಬೌಲಿಂಗ್ ಕೋಚ್ ಆಗಿ ನೇಮಕವಾದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಕೋಚ್ ಹುದ್ದೆಗೆ ಆಯ್ಕೆಯಾದರೆ 6 ಸಹಾಯಕರೂ ಜತೆಯಿರಬೇಕು: ರವಿ ಶಾಸ್ತ್ರಿ ಷರತ್ತು